ಕೂಡಿಗೆ, ಅ. 26: ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಬಾಗಲಕೋಟೆ, ತೋಟಗಾರಿಕಾ ಮಹಾ ವಿದ್ಯಾಲಯ ಶಿರಸಿ, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶೂನ್ಯ ಬಂಡವಾಳದಿಂದ ನೈಸರ್ಗಿಕ ಕೃಷಿ ಯೋಜನೆ ಇದರನ್ವಯ ರೈತರಿಗೆ ತರಬೇತಿ ಕಾರ್ಯಾಗಾರ ಹುಲುಸೆ ಗ್ರಾಮದ ರೈತ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ವಹಿಸಿದ್ದರು. ಶಿರಸಿ ತೋಟಗಾರಿಕಾ ಮಹಾ ವಿದ್ಯಾಲಯದ ಡಾ. ಸೋಮು ಜೀವವೈವಿದ್ಯ ಮತ್ತು ಬೀಜೋತ್ಪನೆ ಬಗ್ಗೆ ಮಾಹಿತಿ ನೀಡಿದರು. ಡಾ. ರಾಹುಲ್ ಪೆಂಟಕಲ್ ಸಸ್ಯ ರೋಗ ಮತ್ತು ಕೀಟಬಾಧೆಯಿಂದ ಬೆಳೆಗಳಿಗೆ ಹಾನಿ ಹಾಗೂ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನಿಗಳಾದ ಡಾ. ಮಂಜುನಾಥ್ ಮಣ್ಣಿನ ಗುಣಮಟ್ಟ, ಅದರ ವಿಶ್ಲೇಷಣೆ ಬಗ್ಗೆ ತಿಳಿಸಿದರು.

ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಕಪಿನಪ್ಪ, ಕುಶಾಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪೂಣಚ್ಚ ಸೇರಿದಂತೆ ನೂರಾರು ರೈತರು ಇದ್ದರು.