ಮಡಿಕೇರಿ, ಅ. 26: ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ಮತ್ತು ನಿರ್ದೇಶನದ ‘ಕೊಡಗ್ರ ಸಿಪಾಯಿ’ ಕೊಡವ ಚಲನಚಿತ್ರದ 15ನೇ ದಿನದ ಪ್ರದರ್ಶನ ಚೇರಂಬಾಣೆಯ ಬೇಂಗ್ನಾಡ್ ಕೊಡವ ಸಮಾಜದಲ್ಲಿ ನಡೆಯಿತು.
ಈ ಸಂದರ್ಭ ಪ್ರಾಸ್ತವಿಕವಾಗಿ ಮಾತನಾಡಿದ, ನಟ ಹಾಗೂ ನಿರ್ಮಾಣ ನಿರ್ವಹಣೆ ಮಾಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಇದೊಂದು ಕಲಾತ್ಮಕ ಚಿತ್ರವಾಗಿದ್ದು, ಒಂದೇ ಚಿತ್ರದಲ್ಲಿ ಹಲವಾರು ಸಂದೇಶಗಳನ್ನು ನೀಡಲಾಗಿದೆ ಎಂದರು.
ನಿರ್ದೇಶಕ, ನಿರ್ಮಾಪಕ, ನಟ ಕೊಟ್ಟುಕತ್ತಿರ ಪ್ರಕಾಶ್, ಕೊಡಗ್ರ ಸಿಪಾಯಿ ಚಲನಚಿತ್ರ ಬಿಡುಗಡೆಗೊಂಡು 15 ದಿನಗಳ ಪ್ರದರ್ಶನದ ನಂತರ ಉತ್ತಮ ಜನ ಮನ್ನಣೆಯನ್ನು ಪಡೆದಿದ್ದು, ಜನರ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಚಲನ ಚಿತ್ರವನ್ನು ನಿರ್ಮಿಸಲು ಉತ್ತೇಜಿಸಿದಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೇಂಗ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಮಣಿ ಕುಂಙಪ್ಪ ಮಾತನಾಡಿ, ನಮ್ಮ ಗ್ರಾಮದವರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಸಾಹಿತ್ಯ ಹಾಗೂ ಕೊಡವ ಚಲನಚಿತ್ರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವದಲ್ಲದೆ ಕನ್ನಡ ಚಿತ್ರರಂಗದಲ್ಲೂ ಗಮನ ಸೆಳೆದಿದ್ದಾರೆ ಎಂದರು.
ಈಗಾಗಲೇ ಕೊಡಗ್ರ ಸಿಪಾಯಿ ಚಲನಚಿತ್ರ ವಿವಿಧೆಡೆ ಪ್ರದರ್ಶನ ಕಂಡಿದ್ದು, ತಾ. 26 ಮತ್ತು 27 ರಂದು ಮೈಸೂರು, ನ. 1 ರಂದು ಟಿ. ಶೆಟ್ಟಿಗೇರಿ ಹಾಗೂ ನ. 4 ಮತ್ತು 6 ರಂದು ಬೆಂಗಳೂರಿ ನಲ್ಲಿ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಬೆಂಗ್ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಅಯ್ಯಂಡ ಸತೀಶ್, ಕಾರ್ಯದರ್ಶಿ ಬಾಚರಣಿಯಂಡ ದಿನೇಶ್ ಗಣಪತಿ, ಬೆಂಗ್ನಾಡ್ ಕೊಡವ ಸಮಾಜದ ಕ್ಲಬ್ನ ಅಧ್ಯಕ್ಷÀ ಪಟ್ಟಮಾಡ ಕುಶ, ಚಲನಚಿತ್ರ ವಿತರಕ ಬಾಳೆಯಡ ಪ್ರತೀಶ್ ಪೂವಯ್ಯ, ಅಚ್ಚೆಯಂಡ ಗಗನ್ ಗಣಪತಿ, ಸಮಾಜ ಸೇವಕರಾದÀ ತೇಲಪಂಡ ಶಂಭು ಅಪ್ಪಯ್ಯ ಹಾಜರಿದ್ದರು.
ಸಾಬು ಪೆಮ್ಮಯ್ಯ ಪ್ರಾರ್ಥಿಸಿ, ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ವಂದಿಸಿದರು.