ಕೂಡಿಗೆ, ಅ. 26: ಹಾರಂಗಿಯ ರಾಜ್ಯ ತೋಟಗಾರಿಕಾ ಇಲಾಖೆಯ ವತಿಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಅಡಿಯಲ್ಲಿ ಬೆಳೆಸಲಾಗಿರುವ ಕಾಳುಮೆಣಸು ಬಳ್ಳಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯ ತೋಟಗಾರಿಕಾ ವಲಯದ ಮೂಲಕ ಆಯಾ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಶಿಫಾರಸ್ಸು ಪತ್ರ ಹಾಗೂ ರೈತರ ಜಮೀನಿನ ದಾಖಲಾತಿ ಪತ್ರಗಳನ್ನು ಪಡೆದು ರೈತರಿಗೆ ಉಚಿತವಾಗಿ ಕಾಳುಮೆಣಸು ಬಳ್ಳಿಗಳನ್ನು ವಿತರಣೆ ಮಾಡಲಾಗುತ್ತಿದೆ.

ಈಗಾಗಲೇ ಹಾರಂಗಿ ತೋಟಗಾರಿಕಾ ಕ್ಷೇತ್ರ ಮತ್ತು ಮದಲಾಪುರ ತೋಟಗಾರಿಕಾ ಕ್ಷೇತ್ರಗಳಲ್ಲಿ ರೈತರಿಗೆ 72,000 ಕಾಳುಮೆಣಸು ಬಳ್ಳಿಗಳನ್ನು ವಿತರಣೆ ಮಾಡಲಾಗುತ್ತಿದೆ.