ಮಡಿಕೇರಿ, ಅ. 26: ಟಾಟಾ ಇಂಡಿಕಾ ಕಾರಿನಲ್ಲಿ (ಕೆಎ-12 ಬಿ-0292) ಆನೆದಂತ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಮೈಸೂರು ಅರಣ್ಯ ಸಂಚಾರಿ ಪತ್ತೆದಳ ದವರು ಪಿರಿಯಾಪಟ್ಟಣ ಬಳಿ ಆನೆ ದಂತ, ಕಾರನ್ನು ವಶಪಡಿಸಿಕೊಂಡು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ದಂತ 20 ಕೆ.ಜಿ. ತೂಕ ವಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.