ಮಡಿಕೇರಿ, ಅ. 25: ಮಡಿಕೇರಿ ನಗರದ ಶ್ರೀ ವಿಜಯವಿನಾಯಕ ಗೌಡ ಒಕ್ಕೂಟದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ತಾ.27ರಂದು ಕೊಡಗು ಗೌಡ ವಿದ್ಯಾಸಂಘದ ಆವರಣದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಕುರಿಕಡ ಆನಂದ ವಹಿಸುವರು.

ಮುಖ್ಯ ಅತಿಥಿಗಳಾಗಿ ಡಿ.ವೈ.ಎಸ್.ಪಿ.ಗಳಾದ ಬಾರಿಕೆ ದಿನೇಶ್ ಕುಮಾರ್, ಪೆರ್ಬಾಯಿ ಮುರಳೀಧರ್, ವಕೀಲ ಮುಕ್ಕಾಟಿ ವಾಸುದೇವ್ , ನಿವೃತ್ತ ಶಿಕ್ಷಕ ಕಟ್ರತನ ಬೆಳ್ಯಪ್ಪ ಅವರುಗಳು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು, ಮಕ್ಕಳಿಗೆ ಮನರಂಜನಾ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ ತಿಳಿಸಿದ್ದಾರೆ.