ಮಡಿಕೇರಿ, ಅ.25: ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ರಾಜ್ಯ ಮಟ್ಟದ ‘ಪ್ರಿಯ ಬಾಪು ನೀವು ಯಾವತ್ತು ಅಮರ’ ಎಂಬ ವಿಷಯದ ಬಗ್ಗೆ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.
ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್ವಲಪ್ ಉಪಯೋಗಿಸತಕ್ಕದ್ದು. ಇನ್ಲ್ಯಾಂಡ್ ಲೆಟರ್ ಕಾರ್ಡ್ ಉಪಯೋಗಿಸುವವರು 500 ಪದಗಳನ್ನು ಮತ್ತು ಎನ್ವಲಪ್ ಉಪಯೋಗಿಸುವವರು 1000 ಪದಗಳನ್ನು ಎಫೋರ್ ಶೀಟ್ನಲ್ಲಿ ಬರೆದು ಎನ್ವಲಪ್ ಒಳಗೆ ಹಾಕಿ ಕಳುಹಿಸಬೇಕು. ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಗೆ ಉಪಯೋಗಿಸಿದ ಇನ್ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್ವಲಪ್ ಮೇಲೆ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು -560001 ಪತ್ರ ಬರೆಯುವ ಸ್ಪರ್ಧೆ’’ ಎಂಬ ವಿಳಾಸ ಬರೆದು ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ಪತ್ರ ಕಚೇರಿಗೆ ತಲುಪಲು ನವೆಂಬರ್ 29 ಕೊನೆಯ ದಿನವಾಗಿದೆ. ಈ ಸ್ಪರ್ಧೆಯ ಮೊದಲ ವಿಜೇತರಿಗೆ ರೂ.25,000, ಎರಡನೇ ವಿಜೇತರಿಗೆ ರೂ.10,000 ಮತ್ತು ತೃತೀಯ ವಿಜೇತರಿಗೆ ರೂ.5,000 ನಗದು ನೀಡಲಾಗುವದು. ಈ ಸ್ಪರ್ಧೆಯಲ್ಲಿ ಯಾವದೇ ವಯೋಮಾನದವರು ಭಾಗವಹಿಸಲು ಅವಕಾಶವಿದೆ ಎಂದು ಅಂಚೆ ಕಚೇರಿಯ ಅಧೀಕ್ಷಕರು ಅವರು ತಿಳಿಸಿದ್ದಾರೆ.