ಮಡಿಕೇರಿ, ಅ. 25: ಮುಳಿಯ ಜ್ಯುವೆಲ್ಸ್ ಮಡಿಕೇರಿ ಶೋರೂಂನಲ್ಲಿ ತಾ. 31 ರವರೆಗೆ ಚಿನ್ನೋತ್ಸವ ನಡೆಯಲಿದೆ.

“ಸೆಲೆಬರೇಟ್ ದ ಗೋಲ್ಡ್” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶಾಲಶ್ರೇಣಿಯ, ವಿನೂತನ ಬಗೆಯ ವಿವಿಧ ಆಭರಣಗಳ ಸಂಗ್ರಹ ವಿಶೇಷ ಎಂದು ಪಾಲುದಾರ ಕೃಷ್ಣನಾರಾಯಣ ಮುಳಿಯರವರು ತಿಳಿಸಿದ್ದಾರೆ.

1919 ಅಂದರೆ ಕಳೆದ 100 ವರ್ಷಗಳ ಹಿಂದೆ ಚಿನ್ನದ ಬೆಲೆ 1 ಗ್ರಾಂಗೆ ರೂ. 1 ಅಂದಾಜು ಇತ್ತು. ಈಗ 2019ರಲ್ಲಿ ಬೆಲೆ ರೂ.3485/- ಇದೆ. ಮುಳಿಯ 75 ವರ್ಷಗಳ ಹಿಂದೆ ಆರಂಭವಾದಾಗ ಗ್ರಾಂ ಒಂದಕ್ಕೆ ರೂ. 20/- ಇತ್ತು. “ಚಿನ್ನ ಎಂದೂ ಕೈ ಬಿಡುವದಿಲ್ಲ” ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಪಾಲುದಾರ ಕೇಶವ ಪ್ರಸಾದ್ ಮುಳಿಯರವರು ವಿವರಿಸಿದ್ದಾರೆ.