ಶನಿವಾರಸಂತೆ, ಅ. 25: ಸಮೀಪದ ಕಿರಿಕೊಡ್ಲಿ ಮಠದ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಯುತ್ತಿರುವ ಮದ್ಯ ವರ್ಜನ ಶಿಬಿರದಲ್ಲಿ ನಿತ್ಯವೂ ಗುಂಪು ಹಾಗೂ ಕೌಟುಂಬಿಕ ಸಲಹೆ ಕಾರ್ಯಕ್ರಮ, ಮಾಹಿತಿ ಮಾರ್ಗದರ್ಶನ, ಭಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶಿಬಿರಾರ್ಥಿಗಳನ್ನು ರಂಜಿಸುತ್ತಿವೆ. 6ನೇ ದಿನದ ಗುಂಪು ಹಾಗೂ ಕುಟುಂಬ ಸಲಹೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕಿ ಶ.ಗ. ನಯನತಾರಾ ಹಾಗೂ ಶಿಕ್ಷಕಿ ಸುಧಾಮತಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎಸ್. ವರಪ್ರಸಾದ್, ಶಿಬಿರಾಧಿ ಕಾರಿ ನಂದಕುಮಾರ್, ವರದಿಗಾರ ಸಿ. ಪ್ರಕಾಶ್ಚಂದ್ರ, ವಲಯ ಮೇಲ್ವಿಚಾರಕ ರಮೇಶ್, ಎಸ್.ಆರ್. ಶೋಭಾ, ಯಶೋದಾ, ಗಿರಿಜಾ, ಬಾನು ಮತ್ತಿತರ ಸೇವಾ ಪ್ರತಿನಿಧಿಗಳು ಹಾಜರಿದ್ದರು.