ಗೋಣಿಕೊಪ್ಪ ವರದಿ, ಅ. 25: ಹಾಕಿಕೂರ್ಗ್ ವತಿಯಿಂದ ಬಿ. ಡಿವಿಜನ್ ಹಾಕಿ ಲೀಗ್ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾ. 27 ರಿಂದ ನವೆಂಬರ್ 2 ರವರೆಗೆ ನಡೆಯಲಿದ್ದು, ಜಿಲ್ಲೆಯ 17 ತಂಡಗಳು ಲೀಗ್‍ನಲ್ಲಿ ಪಾಲ್ಗೊಳ್ಳಲಿವೆ.

ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಬೇತು ಯೂತ್ ಕ್ಲಬ್, ವೀರಾಜಪೇಟೆ ಫೀ. ಮಾ. ಕಾರ್ಯಪ್ಪ, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ (ಬಿ), ಕಿರುಗೂರು, ವೀರಾಜಪೇಟೆ ಕೆ.ಎಸ್.ಆರ್.ಸಿ, ಡ್ರಿಬ್ಲಿಂಗ್ ಹೆಂಪ್, ಮರೆನಾಡ್ ಸ್ಪೋಟ್ರ್ಸ್, ಮಲೆನಾಡ್ ಅಸೋಸಿಯೇಷನ್, ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್, ಎಸ್.ಆರ್.ಸಿ ಕಾಕೋಟುಪರಂಬು, ಕೂಡಿಗೆ ಸ್ಪೋಟ್ರ್ಸ್ ಸ್ಕೂಲ್ (ಬಿ), ಸೋಮವಾರಪೇಟೆ ಡಾಲ್ಪಿನ್ಸ್, ಬೊಟ್ಯತ್‍ನಾಡ್, ಜನರಲ್ ತಿಮ್ಮಯ್ಯ ಅಕಾಡೆಮಿ, ಶ್ರೀಮಂಗಲ ಕೊಡವ ಸಮಾಜ, ಪೆರೂರಿಯನ್ಸ್ ತಂಡಗಳು ಸೆಣೆಸಾಟ ನಡೆಸಲಿವೆ ಎಂದು ಟೂರ್ನಿ ನಿರ್ದೇಶಕ ನೆಲ್ಲಮಕ್ಕಡ ಪವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.