ಕಡಂಗ, ಅ. 25: ಕೊಡಗಿನಲ್ಲಿ ಘಟಿಸಿದ ಭೀಕರ ಜಲ ಪ್ರಳಯಕ್ಕೆ ತುತ್ತಾಗಿ ಮನೆಯನ್ನು ಕಳೆದುಕೊಂಡ ಕೊಂಡಂಗೇರಿ, ಕಟ್ಟೆಮಾಡು ನಿವಾಸಿಗಳಿಗೆ ಕಡಂಗದ ಬದ್ರಿಯ ಸಂಸ್ಥೆಯ ಸಿಬ್ಬಂದಿ ಹಸೈನಾರ್ ಮುಸ್ಲಿಯಾರ್ ಅವರ ಮೂಲಕ ಸಂಸ್ಥೆಯ ಅನಿವಾಸಿ ಭಾರತೀಯರ ಒಕ್ಕೂಟ ತಾಜುಲ್ ಉಲಾಮ ಜಿಸಿಸಿ ವತಿಯಿಂದ 50,000 ರೂಪಾಯಿ ಆರ್ಥಿಕವಾಗಿ ನೀಡಿ ಸಹಾಯ ಹಸ್ತ ಚಾಚಲಾಯಿತು. ಈ ಸಂದರ್ಭ ಮಹಲ್ ಖತೀಬ್ ಉಸ್ತಾದ್ ಹ್ಯಾರಿಸ್ ಸಖಾಫಿ, ಕೆಸಿಫ್‍ನ ಪದಾಧಿಕಾರಿ ಅಬೂಬಕರ್ ಬಹರೈನ್, ಷಂಶುದ್ದೀನ್ ಅಬುಧಾವಿ, ಸಂಸ್ಥೆಯ ಅಧ್ಯಕ್ಷ ಸುಲೈಮಾನ್ ಸಿ.ಎಂ., ಎಸ್‍ವೈಎಸ್ ಸಲಾಂ ಎಂ. ಹಾಜರಿದ್ದರು.
-ನೌಫಲ್ ಕಡಂಗ