ಗೋಣಿಕೊಪ್ಪಲು, ಅ. 25: : ಗಂಧದ ಮರ ಕಳವು ಆರೋಪದಡಿ ಯಲ್ಲಿ 15 ದಿನಗಳಿಂದ ತಲೆ ಮರೆಸಿಕೊಂಡಿದ್ದ ಮಾಯಮುಡಿಯ ಸತೀಶ ಎಂಬಾತನನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಮೇಲೆ 4 ಗಂಧದ ಮರ ಕಳವಿನ ಮೊಕದ್ದಮೆ ಇವೆ. ಆತನ ಸೆರೆಗಾಗಿ ಬಲೆ ಬೀಸಲಾಗಿತ್ತು ಎಂದು ತಿತಿಮತಿ ಆರ್‍ಎಫ್‍ಒ ಅಶೋಕ್ ಹುನುಗುಂದ ತಿಳಿಸಿದ್ದಾರೆ.