ನಾಪೆÉÇೀಕ್ಲು, ಅ. 25: ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕನಿಗೆ ಕೇಂದ್ರ ಸರಕಾರ ನಿಗದಿತ ಪ್ರಮಾಣದ ಮದ್ಯವನ್ನು ಕ್ಯಾಂಟೀನ್ ಮೂಲಕ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಅದನ್ನು ಆತ ಬಳಸುವದಕ್ಕೆ ಅಬಕಾರಿ ಇಲಾಖೆಯ ಅಪ್ಪಣೆ ಏಕೆ ಎಂದು ನಾಪೆÇೀಕ್ಲು ಮಾಜಿ ಸೈನಿಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ನಾಪೆÉÇೀಕ್ಲು ಮಾಜಿ ಸೈನಿಕ ಸಂಘದ ಅಧ್ಯಕ್ಷ ಪಾಡೇಯಂಡ ಶಂಭು ಮಾತನಾಡಿದರು.

ಕೊಡಗಿನಲ್ಲಿ ಮದ್ಯ ಇಲ್ಲದೆ ಯಾವದೇ ಸಮಾರಂಭ ಇಲ್ಲ, ದೇವರಿಗೆ ಎಡೆ ಇಡುವಾಗಲೂ ಮದ್ಯ ಬಳಕೆ ಮಾಡುತ್ತೇವೆ. ಮಾಜಿ ಸೈನಿಕರಿಗೆ ಸೈನಿಕ ಕಲ್ಯಾಣ ಇಲಾಖೆಯಿಂದ ಕ್ಯಾಂಟೀನ್ ಮೂಲಕ ತಿಂಗಳಿಗೆ ಇಂತಿಷ್ಟು ಮದ್ಯ ಎಂದು ನೀಡಲಾಗುತ್ತಿದೆ. ಅದನ್ನು ಶೇಖರಿಸಿಕೊಂಡು ತಮ್ಮ ಮತ್ತು ಸಂಬಂಧಿಕರ ಸಮಾರಂಭಗಳಿಗೆ ಬಳಸಲು ಅಬಕಾರಿ ಇಲಾಖೆ ಆಕ್ಷೇಪಣೆ ಎತ್ತಿರುವದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದÀರು. ಜಿಲ್ಲೆಯಲ್ಲಿ ಬ್ರಾಂದಿ ಅಂಗಡಿಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಾಡುತ್ತಿರುವದು ಅಬಕಾರಿ ಇಲಾಖೆಗೆ ತಿಳಿದಿಲ್ಲವೇ ಎಂದ ಅವರು, ಮದ್ಯ ಮಾರಾಟಗಾರರು ಮತ್ತು ಅಬಕಾರಿ ಇಲಾಖೆ ಶಾಮೀಲಾಗಿರುವದಕ್ಕೆ ಇದು ಸಾಕ್ಷಿಯಾಗಿದೆ ಎಂದರು. ಮಾಜಿ ಸೈನಿಕರಿಗೆ ತೊಂದರೆ ಮಾಡುವದನ್ನು ತಕ್ಷಣ ನಿಲ್ಲಿಸಬೇಕು ಇಲ್ಲದಿದ್ದರೆ ಮುಂದೆ ಮಾಜಿ ಸೈನಿಕರು ಇಲಾಖೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೊಂಡಿರ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಅಪ್ಪಚ್ಚು. ಖಜಾಂಚಿ ಕರೀಂ ಇದ್ದರು.