ಸಿದ್ದಾಪುರ, ಅ. 25: ಮಡಿಕೇರಿ ಮತ್ತು ಚೆಟ್ಟಳ್ಳಿ ಮಾರ್ಗದ ಮಧ್ಯೆ ಅಬ್ಯಾಲ ಎಂಬಲ್ಲಿ ರಸ್ತೆ ಬದಿಯ ಮಣ್ಣಿನ ಗುಡ್ಡ ಕುಸಿದು ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ರಸ್ತೆಯ ಎರಡು ಬದಿಯಲ್ಲಿ ನಿಂತು ವಾಹನ ಸವಾರಿರಿಗೆ ತೊಡಕು ಉಂಟಾಗಿತ್ತು ಸ್ಥಳೀಯರ ನೆರವಿನಿಂದ ಮರವನ್ನು ಗರಗಸದಿಂದ ಕತ್ತರಿಸಿ ಸಂಚಾರ ಸುಗಮಗೊಳಿಸಲಾಯಿತು