ಚೆಟ್ಟಳ್ಳಿ, ಅ. 24: ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬ ವತಿಯಿಂದ ದುಬೈಯ ಎತಿಸಲಾತ್ ಸ್ಪೋಟ್ರ್ಸ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ದುಬೈ ದಸರಾ ಕ್ರೀಡೋತ್ಸವದಲ್ಲಿ ಅಂತರ್ರಾಷ್ಟ್ರೀಯ ಓಟಗಾರ್ತಿ, ಅರ್ಜುನ ಪ್ರಶಸ್ತಿ ವಿಜೇತೆ ಕೊಡಗಿನ ಪುಚ್ಚಿಮಾಡ ಅಶ್ವಿನಿ ನಾಚಪ್ಪ ಅವರಿಗೆ ಪ್ರತೀ ವರ್ಷ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದವರು ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ತಾಯಿನಾಡಿನಿಂದ ಕರೆಸಿ ನೀಡುವ ಪ್ರತಿಷ್ಠಿತ ದುಬೈ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕ್ರೀಡಾಕೂಟ ಆಯೋಜಕರಾದ ಹೆಮ್ಮೆಯ ಯುಏಇ ಕನ್ನಡಿಗರು ದುಬೈ ಕುಟುಂಬ ಸದಸ್ಯರುಗಳಾದ ರಫೀಕಲಿ ಕುಂಡಂಡ ಕುಂಜಿಲ ಸುದೀಪ್ ದಾವಣಗೆರೆ, ಶಶಿಧರ್, ಸೆಂತಿಲ್ ಬೆಂಗಳೂರು, ಮಧು ದಾವಣಗೆರೆ, ಮಮತಾ ಮೈಸೂರು, ಮಮತಾ ಶಾರ್ಜಾ , ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು ಮತ್ತು ವಿಷ್ಣುಮೂರ್ತಿ ಮೈಸೂರು ಹಾಜರಿದ್ದರು ಅಲ್ಲದೆ ಎಮ್ ಸ್ಕ್ವೇರ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಮಾಲೀಕ ಮೊಹಮ್ಮದ್ ಮುಸ್ತಫಾ, ದುಬೈ ನಾಗರಿಕ ಹಿಸ್ ಎಕ್ಸಲನ್ಸಿ ಶೇಕ್ ಅಬ್ದುಲ್ಲಾ, ಕ್ಯಾಪ್ರಿಸ್ ಸಿಇಓ ಎಮ್.ಎಸ್. ಖಾನ್, ಝೈನ್ ಇಂಟೆರ್‍ನ್ಯಾಷನಲ್ ಹೊಟೇಲ್ ಮಾಲಿಕ ಝಫರುಲ್ಲಾ ಖಾನ್ ಮಂಡ್ಯ, ಫಾಚ್ರ್ಯೂನ್ ಗ್ರೂಪ್ ಆ ಹೊಟೇಲ್ಸ್ ಎಂಡಿ ಪ್ರವೀಣ್ ಶೆಟ್ಟಿ, ರೇವಾ ಮೆಡಿಕಲ್ ಸೆಂಟರ್ ಮಾಲೀಕ ಡಾ. ರಶ್ಮಿ, ಮೋಹನ್ ಉಪ್ಪಿನ್, ಡಾ. ಗುರುಮಾಧವ ರಾವ್, ಚೇತನ್ ಮತ್ತು ಶೇಖರ್ ರೆಡ್ಡಿ ಇದ್ದರು. ಅಶ್ವಿನಿ ನಾಚಪ್ಪ ಅವರು ದುಬೈ ದಸರಾ ಕ್ರೀಡೋತ್ಸವದ ಉದ್ಘಾಟಕರು ಮತ್ತು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

-ಇಸ್ಮಾಯಿಲ್ ಕಂಡಕರೆ