ಸಿದ್ದಾಪುರ, ಅ. 24: ಅಂಗಡಿ ಒಂದರಿಂದ ಇಟ್ಟಿದ್ದ ಸಿಲಿಂಡರ್ ಹಾಗೂ ನಗದನ್ನು ಕಳ್ಳತನ ಮಾಡಿರುವ ಘಟನೆ ಮಾಲ್ದಾರೆ ಸಮೀಪದ ಗೂಡ್ಲೂರು ಗ್ರಾಮದಲ್ಲಿ ನಡೆದಿದೆ. ಗೂಡ್ಲೂರು ನಿವಾಸಿಯಾಗಿರುವ ಎಂ. ಪ್ರಭು ಎಂಬವರು ಬುಧವಾರದಂದು ವ್ಯಾಪಾರ ಮುಗಿಸಿ ತಮ್ಮ ಮನೆಗೆ ತೆರಳಿದ್ದರು.

ಮಧ್ಯ ರಾತ್ರಿ ಯಾರೋ ಕಳ್ಳರು ಅಂಗಡಿಯೊಳಗೆ ನುಗ್ಗಿ ಅಂಗಡಿಯಲ್ಲಿ ಇಟ್ಟಿದ್ದ ಮೂರು ಗ್ಯಾಸ್ ಸಿಲಿಂಡರ್, ನಗದು ಹಣ ಮತ್ತು ಅಂಗಡಿಯ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ.

ಈ ಬಗ್ಗೆ ಪ್ರಭುರವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.