ಮಡಿಕೇರಿ, ಅ. 23: ರಾಜ್ಯದಲ್ಲಿ ಐದು ಭಾಷಾ ಅಕಾಡೆಮಿಗಳಿದ್ದು, ಪಂಚ ಭಾಷಾ ಅಕಾಡೆಮಿಗಳನ್ನು ಸೇರಿಸಿಕೊಂಡು ಎಲ್ಲಾ ಸಮುದಾಯ ದೊಂದಿಗೆ ಸಾಮರಸ್ಯ ಸಾಧಿಸುವ ಗುರಿ ಹೊಂದಿರುವದಾಗಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ ಹೇಳಿದರು.ಅಕಾಡೆಮಿ ಕಚೇರಿಯಲ್ಲಿಂದು ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಅವರು, ಜಾಗತೀಕರಣ ಯುಗದಲ್ಲಿ ಪ್ರಾದೇಶಿಕ ಭಾಷೆಗಳು ಅಪಾಯದಂಚಿನಲ್ಲಿರುವದನ್ನು ಮನಗಂಡ ಸರಕಾರ ಅಕಾಡೆಮಿ ಗಳನ್ನು ಸ್ಥಾಪನೆ ಮಾಡಿ ಭಾಷೆಯ ಉಳಿವಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಭಾಷೆ, ಸಂಸ್ಕøತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಸರಕಾರ ನನಗೆ ಕೊಟ್ಟಿದೆ. ಅಕಾಡೆಮಿಯಲ್ಲಿ ಹಿರಿಯರು, ಸಮಾನ ವಯಸ್ಕರೂ ಇದ್ದು, ಭಾಷೆ, ಸಂಸ್ಕøತಿಯ ಏಳಿಗೆಗೆ ಕೆಲಸ ಮಾಡುವದಾಗಿ ಹೇಳಿದರು. ಎಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.(ಮೊದಲ ಪುಟದಿಂದ) ನೂತನ ಅಧ್ಯಕ್ಷರಿಗೆ ಕಡತ ಹಸ್ತಾಂತರಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಹಳೆ ಅನುಭವವುಳ್ಳವರು. ಹೊಸ ಹುರುಪಿನ ಯುವಕರ ತಂಡದ ಆಡಳಿತ ಮಂಡಳಿ ರಚನೆಯಾಗಿದೆ. ಸದ್ಯದಲ್ಲಿಯೇ ಅಕಾಡೆಮಿಗೆ ರಿಜಿಸ್ಟಾರ್‍ಗಳ ನೇಮಕವಾಗಲಿದ್ದು, ಸಹಮತದೊಂದಿಗೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು.

ಸದಸ್ಯ ದಂಬೆಕೋಡಿ ಆನಂದ ಮಾತನಾಡಿ, ಅಕಾಡೆಮಿಗೆ ಪರಿಪೂರ್ಣ ಸದಸ್ಯರ ನೇಮಕವಾಗಬೇಕಿದ್ದು, ಸುಳ್ಯದ ಕಡೆಯಿಂದ ನೇಮಕವಾದ ಬಳಿಕ ಕ್ರಿಯಾಯೋಜನೆ ರೂಪಿಸಿ ಶುದ್ಧ ಮನಸ್ಸಿನಿಂದ ಕೆಲಸ ಮಾಡುವ ಬಗ್ಗೆ ಸಲಹೆ ನೀಡಿದರು. ಸಂಸ್ಕøತಿ ಇಲಾಖಾ ಸಚಿವ ಸಿ.ಟಿ. ರವಿ ಅವರು ‘ಅಕಾಡೆಮಿಗೆ ಮನೆ ಮುರುಕರನ್ನ ನೇಮಕ ಮಾಡಿಲ್ಲ’ ಎಂಬ ಹೇಳಿಕೆ ನೀಡಿರುವ ಬಗ್ಗೆ ಅಸಮಾಧಾನವಿದೆ; ಇದು ಪಕ್ಷದ ಕಾರ್ಯಕರ್ತರನ್ನು ಕೀಳುಮಟ್ಟದಲ್ಲಿ ನೋಡಿದ ಹಾಗಾಗುತ್ತದೆ. ನೇಮಕವಾಗಿರುವ ಸದಸ್ಯರು ಮನೆ ಮುರುಕರಲ್ಲ ಎಂಬ ನಂಬಿಕೆ ಇದೆ, ಸುಮ್ಮನೆ ಸಭೆಗಳನ್ನು ಮಾಡಿ ಪ್ರಚಾರ ಪಡೆದುಕೊಳ್ಳುವದಕ್ಕಿಂತ ಕೆಲಸ ಮಾಡೋಣವೆಂದರು.

ಸದಸ್ಯೆ ಸ್ಮಿತಾ ಅಮೃತ್‍ರಾಜ್ ಅವರು, ತನ್ನದು ಅನಿರೀಕ್ಷಿತ ಆಯ್ಕೆಯಾಗಿದ್ದು, ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವ ಇಂಗಿತ ವ್ಯಕ್ತಪಡಿಸಿದರು. ಅರೆಭಾಷೆ ಉಪಭಾಷೆಯಾಗಿದ್ದು, ಶ್ರೀಮಂತಿಕೆ ಇದೆ. ಹಾಡು, ಹಸೆ, ಸೋಬಾನೆಯೊಂದಿಗೆ ಶ್ರೀಮಂತವಾಗಿದೆ. ಎಲ್ಲರೂ ಸೇರಿ ಉಳಿಸಿ ಬೆಳೆಸಿಕೊಂಡು ಹೋಗೋಣ, ಭಾಷೆ ಉಳಿದರೆ, ಸಂಸ್ಕøತಿ ಶ್ರೀಮಂತವಾಗಲು ಸಾಧ್ಯವೆಂದರು.

ಚೊಕ್ಕಾಡಿ ಪ್ರೇಮಾರಾಘವಯ್ಯ ಹಿರಿಯರು, ಕಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು. ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಸಾಹಿತ್ಯ ಬೆಳೆಯುತ್ತಿದೆ, ಇದರೊಂದಿಗೆ ಸಂಸ್ಕøತಿಯೂ ಬೆಳೆಯಬೇಕಾಗಿದೆ. ಎಲ್ಲವನ್ನೂ ಪುಸ್ತಕ ರೂಪದಲ್ಲಿ ತರಬೇಕಿದೆ. ಸಂಘ, ಸಮಾಜಗಳ ಸಹಕಾರದೊಂದಿಗೆ ಕಾರ್ಯೋನ್ಮುಖವಾಗುವ ಬಗ್ಗೆ ಸಲಹೆ ನೀಡಿದರು. ಆಗೋಳಿಕಜೆ ಧನಂಜಯ ಮಾತನಾಡಿ, ಆಯ್ಕೆ ಅನಿರೀಕ್ಷಿತ, ನೂರಾರು ಭಾಷೆ ಕಣ್ಮರೆಯ ಅಂಚಿನಲ್ಲಿದ್ದು, ನಮ್ಮ ಸಂಸ್ಕøತಿ, ಭಾಷೆಯನ್ನು ಮರೆಯಬಾರದು. ಸಂಸ್ಕøತಿ, ಸಾಹಿತ್ಯ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕೊಡಗು ಹಾಗೂ ಸುಳ್ಯ ಭಾಗದಲ್ಲಿ ಅಡಕವಾಗಿರುವ ಸಂಸ್ಕøತಿಯನ್ನು ಬೆಳೆಸುವತ್ತ ಹೆಜ್ಜೆಯಿಡೋಣ ಎಂದು ಸಲಹೆ ಮಾಡಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ, ಅಕಾಡೆಮಿ ಮಾಜಿ ಸದಸ್ಯ ಕುಡೆಕಲ್ ಸಂತೋಷ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರು, ಸದಸ್ಯರುಗಳಿಗೆ ಶುಭ ಹಾರೈಸಿದರು. ಸದಸ್ಯ ಸೂರ್ತಲೆ ಸೋಮಣ್ಣ ಭಾಗÀವಹಿಸಿರಲಿಲ್ಲ.