ನಾಪೋಕ್ಲು, ಅ. 24: ಸಮೀಪದ ಕೈಕಾಡು ಗ್ರಾಮ ನಿವಾಸಿ ಬೊಳ್ಳಂಡ ಪ್ರವೀಣ್ (44) ತನ್ನ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಗೆ ಸಾಲವಿದ್ದು, ಸಾಲ ಬಾಧೆಯೇ ಆತ್ಮಹತ್ಯೆಗೆ ಕಾರಣ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದು, ನಾಪೋಕ್ಲು ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.