ಮಡಿಕೇರಿ, ಅ. 24: ನ. 23 ರಿಂದ 30ರ ವರೆಗೆ ಶಿವಮೊಗ್ಗದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದ್ದು ಇದಕ್ಕಾಗಿ ಕೊಡಗು ಜಿಲ್ಲಾ ಫುಟ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ತಾ. 26 ರಂದು (ನಾಳೆ) ಗುಡ್ಡೆಹೊಸೂರಿನ ಐಎನ್‍ಎಸ್ ಕ್ರೀಡಾ ಕೇಂದ್ರದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜಿಲ್ಲಾ ಫುಟ್ಬಾಲ್ ಸಂಸ್ಥೆ ಯೊಂದಿಗೆ ನೋಂದಾಯಿಸಿ ಕೊಂಡಿರುವ ತಂಡಗಳ ಆಟಗಾರರು ಮಾತ್ರ ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಟ್ಟು 16 ಮಂದಿ ಆಟಗಾರರ ಆಯ್ಕೆ ನಡೆಯಲಿದ್ದು ಇದರಲ್ಲಿ 21 ವರ್ಷದೊಳಗಿನ ಇಬ್ಬರಿಗೆ ಮತ್ತು 17 ವರ್ಷದೊಳಗಿನ ಇಬ್ಬರು ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ತಂಡಕ್ಕೆ ಆಯ್ಕೆಯಾಗುವ ಆಟಗಾರರಿಗೆ ಪ್ರಯಾಣ ಮತ್ತು ಊಟದ ಭತ್ಯೆಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸ ಲಾಗುತ್ತದೆ. ಹಾಗಾಗಿ ಆಯ್ಕೆಯಾಗುವ ಆಟಗಾರರು ಬ್ಯಾಂಕ್ ಖಾತೆ ಹೊಂದಿರುವದು ಖಡ್ಡಾಯವಾಗಿದೆ. ಜಿಲ್ಲೆಯ ಪ್ರತಿಭಾನ್ವಿತ ಆಟಗಾರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕರೆ ನೀಡಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಕಾರ್ಯದರ್ಶಿ ಐಚೆಟ್ಟಿರ ಪೊನ್ನಪ್ಪ (9900785141) ಅವರನ್ನು ಸಂಪರ್ಕಿಸಬಹುದಾಗಿದೆ.