ಗುಡ್ಡೆಹೊಸೂರು, ಅ. 24 : ಅಕ್ರಮವಾಗಿ ಸ್ವರಾಜ್ ಮಜ್ದಾ (ಕೆಎ 12-ಎ 3740) ವಾಹನದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಳಂಜಿ ಮರದ ನಾಟಾಗಳನ್ನು ಮಡಿಕೇರಿ ತಾಲೂಕಿನ ಕುಂಬಾಳದಾಳು ಗ್ರಾಮದಿಂದ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಪತ್ತೆಹಚ್ಚಿ ವಾಹನ ಸಮೇತ ಚಾಲಕ ಹೊದವಾಡ ಗ್ರಾಮದ ರಜಾಕ್ ಎಂಬಾತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜೆ. ಕಾರ್ಯಪ್ಪ ಮಾರ್ಗದರ್ಶನದಲ್ಲಿ ಉಪ ವಲಯಾಧಿಕಾರಿಗಳಾದ ಕೆ. ದೇವಯ್ಯ., ಐ.ಪಿ. ಗಣಪತಿ, ವಿಕ್ರಂ ಜಿ. ಸುನಿಲ್, ನಾಗಮಣಿ,ಗಣೇಶ್ ಹಾಗೂ ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು