ಮಡಿಕೇರಿ, ಅ. 23: ಈ ಹಿಂದೆ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಗಳ ರ್ಯಾಲಿಯಲ್ಲೂ ಪಾಲ್ಗೊಂಡಿದ್ದ ಕೊಡಗಿನವರಾದ ಎನ್‍ಸಿಸಿ ಕೆಡೆಟ್ ದಿಯಾ ಡಿಸೋಜ ಇದೀಗ ಯುವ ವಿನಿಮಯ ಕಾರ್ಯಕ್ರಮ (ಯೂತ್‍ಎಕ್ಸ್‍ಚೇಂಜ್)ಕ್ಕೆ ಎನ್‍ಸಿಸಿ ಮೂಲಕ ಶ್ರೀಲಂಕಾಕ್ಕೆ ಆಯ್ಕೆಯಾಗಿದ್ದಾಳೆ.
ಈಕೆ ಕಾಟಕೇರಿಯ ನಿವಾಸಿ ಟಾಮ್ ಡಿಸೋಜ ಹಾಗೂ ಸಂತ ಜೋಸೆಫರ ಶಾಲಾ ಶಿಕ್ಷಕಿ ಸರಿತಾ ದಂಪತಿಯ ಪುತ್ರಿಯಾಗಿದ್ದು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಕೆಡೆಟ್ ಕೂಡ ಆಗಿದ್ದಾಳೆ.