ಮಡಿಕೇರಿ, ಅ. 23: ಕೊಡಗಿನ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲದ ಸ್ವಚ್ಛತೆಯೊಂದಿಗೆ; ಶ್ರೀ ಕ್ಷೇತ್ರದ ಪಾವಿತ್ರ್ಯ ಕಾಪಾಡುವಲ್ಲಿ; ದೇವಾಲಯ ವ್ಯವಸ್ಥಾಪನಾ ಸಮಿತಿಯೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸುವಂತೆ; ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಕರೆ ನೀಡಿದ್ದಾರೆ. ಇಂದು ಬಜರಂಗದಳ ಕಾರ್ಯಕರ್ತರು ಶ್ರಮದಾನದೊಂದಿಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವೇಳೆ ಬಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಂಚಾಲಕ ರಘು ಸಕಲೇಶಪುರ ಮಾತನಾಡಿ; ದೇವಾಲಯಗಳು ಹಾಗೂ ತಲಕಾವೇರಿ - ಭಾಗಮಂಡಲದಂತಹ ಪುಣ್ಯಕ್ಷೇತ್ರಗಳ ಸಂರಕ್ಷಣೆಯೊಂದಿಗೆ ಪಾವಿತ್ರ್ಯ ಕಾಪಾಡಲು ಸಂಘಟನೆ ಕಾರ್ಯಕರ್ತರು ಸದಾ ಬೆಂಬಲ ನೀಡುವದಾಗಿ ಭರವಸೆ ನೀಡಿದರು.
ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಆಶಯ ನುಡಿಯಾಡಿದರು. ವಿ.ಹಿಂ.ಪ.ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ಜಿಲ್ಲಾ ಬಜರಂಗದಳ ಸಂಚಾಲಕ ಕೆ.ಹೆಚ್. ಚೇತನ್, ಪ್ರಮುಖರಾದ ಪಿ.ಜಿ. ಕಮಲ್, ಪುದಿಯೊಕ್ಕಡ ರಮೇಶ್, ಪ್ರದೀಪ್, ಬಾಬಣ್ಣ, ನಾಗೇಶ್ ಸೇರಿದಂತೆ ನೂರಾರು ಯುವಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರುಪತ್ತೆಗಾರರಾದ ಪೊನ್ನಣ್ಣ, ಸುನಿಲ್ ಹಾಗೂ ಇತರರು ಹಾಜರಿದ್ದರು.