ಕುಶಾಲನಗರ, ಅ. 23: ಇಲ್ಲಿಗೆ ಸಮೀಪದ ಕೊಪ್ಪದ ನಳಂದ ವಿದ್ಯಾಸಂಸ್ಥೆಯ 11ನೇ ವಾರ್ಷಿಕ ಕ್ರೀಡಾ ದಿನವು ತಾ. 25 ರಂದು ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಒಲಂಪಿಕ್ ಕ್ರೀಡಾಪಟು ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತೆ ಪಿ.ಟಿ. ಉಷಾ ಅವರು ಭಾಗವಹಿಸಲಿದ್ದಾರೆ.