ಮಡಿಕೇರಿ, ಅ. 23: ಕೊಡಗಿನ ಕಥೆಗಾರ್ತಿ ದಿ. ಶ್ರೀಮತಿ ಗೌರಮ್ಮ ಅವರ ನೆನಪಿಗಾಗಿ ಅವರ ಮಗ ದಿ. ಬಿ.ಜಿ. ವಸಂತ್ ಅವರು ಸ್ಥಾಪಿಸಿರುವ ಕೊಡಗಿನ ಗೌರಮ್ಮ ವಾರ್ಷಿಕ ದತ್ತಿ ಪುರಸ್ಕಾರಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.

ಇದುವರೆಗೆ ಈ ಪುರಸ್ಕಾರ ಪಡೆದಿರುವ ಲೇಖಕಿಯರನ್ನು ಹೊರತುಪಡಿಸಿ, ಜಿಲ್ಲೆಯ ಲೇಖಕಿಯರು ತಮ್ಮ ಕೃತಿಗಳನ್ನು ಪುರಸ್ಕಾರಕ್ಕೆ ನೀಡಬಹುದು. ಒಬ್ಬರು ತಮ್ಮ ಒಂದು ಪುಸ್ತಕದ ಮೂರು ಪ್ರತಿಗಳನ್ನು ನವೆಂಬರ್ 5 ರೊಳಗೆ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಎಸ್‍ಜಿಎಸ್‍ವೈ ಕಟ್ಟಡ, ಮಡಿಕೇರಿ ಇಲ್ಲಿಗೆ ಕಚೇರಿ ಕೆಲಸದ ವೇಳೆಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆ ತಿಳಿಸಿದೆ.