ನಾಪೆÉÇೀಕ್ಲು, ಅ. 23: ತಾ. 27 ರಂದು ಸ್ಥಳೀಯ ಗ್ಯಾಂಲೆಟ್ ಶೂಟರ್ಶ್ ವತಿಯಿಂದ ಕೈಲ್ ಮೂಹೂರ್ತ ಹಬ್ಬದ ಪ್ರಯುಕ್ತ ಮುಕ್ತ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ವರ್ಧೆಯನ್ನು ನಾಪೆÉÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಗ್ಯಾಲೆಂಟ್ ಶೂಟರ್ಶ್ ಕ್ಲಬ್ ಅಧ್ಯಕ್ಷ ಅಜ್ಜೇಟಿರ ಗೌತಮ್ ಮಂದಣ್ಣ ಹೇಳಿದರು.

ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೇರೆ, ಬೇರೆ ವಿನ್ಯಾಸದ ಕೋವಿಗಳಿಗೆ ಬೇರೆ, ಬೇರೆ ಸ್ಪಧೆರ್Éಗಳನ್ನು ಏರ್ಪಡಿಸಲಾಗಿದೆ. ಅದರೊಂದಿಗೆ ಭಾರದ ಕಲ್ಲು ಎಸೆಯುವ ಸ್ವರ್ಧೆಯೂ ನಡೆಯಲಿದೆ. ವಿಜೇತರಿಗೆ ಟ್ರೋಫಿಯೊಂದಿಗೆ ನಗದು ಬಹುಮಾನಗಳನ್ನು ನೀಡಲಾಗುವದು ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಾ. 27 ರಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ, 9663788752, 9108005388 ಸಂಪರ್ಕಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕ್ಲಬ್‍ನ ಪದಾಧಿಕಾರಿಗಳಾದ ಚಿಯಕಪೂವಂಡ ಚೇತನ್, ಕೆಲೇಟಿರ ಸನತ್ ಸುಬ್ಬಯ್ಯ ಇದ್ದರು.