ಮಡಿಕೇರಿ, ಅ. 23: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿ ಕೊಂಡಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಛಾಯಾಚಿತ್ರಗಾರರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಹೋಂಸ್ಟೇ ಅಸೋಸಿಯೇಷನ್ ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರವಾಸೋದ್ಯಮ ವಿಭಾಗದ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಭಾಗವಹಿಸಿದ್ದವರಿಗೆ ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಇಲ್ಲಿನ ಹೊಟೇಲ್ ವ್ಯಾಲಿ ವ್ಯೂನಲ್ಲಿ ಪ್ರಶಂಸನಾ ಪತ್ರ ವಿತರಿಸಲಾಯಿತು.
ಛಾಯಾಗ್ರಾಹಕ ಲಕ್ಷ್ಮೀಶ್, ಹವ್ಯಾಸಿ ಛಾಯಾಗ್ರಾಹಕರುಗಳಾದ ಬಿ.ಜಿ. ಅನಂತಶಯನ, ಕುಡೆಕಲ್ ಸಂತೋಷ್, ಅನಿಲ್ ಎಚ್.ಟಿ., ಪ್ರಜ್ಞಾ ಜಿ.ಆರ್., ಕವಿತಾ ವಿ.ರಾಂ., ಹರೀಶ್ ಕಿಗ್ಗಾಲು ಅವರುಗಳು ಪಡೆದುಕೊಂಡರು. ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಅನಂತಶಯನ, ಉಪಾಧ್ಯಕ್ಷರು ಗಳಾದ ಬಾಬಿ, ನಿಮ್ಮಿ ಚಂಗಪ್ಪ, ಕಾರ್ಯದರ್ಶಿ ಮೀನಾ ಕಾರ್ಯಪ್ಪ, ಸಹ ಕಾರ್ಯದರ್ಶಿ ನವೀನ್ ಕುಶಾಲಪ್ಪ, ಖಜಾಂಚಿ ಉಷಾ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.