ಸುಂಟಿಕೊಪ್ಪ, ಅ. 23: ಮದ್ಯ ಸೇವಿಸಿ ವಾಹನ ಚಾಲಿಸುತಿದ್ದ ಚಾಲಕರಿಗೆ ಸುಂಟಿಕೊಪ್ಪ ಪೊಲೀಸರು ಬಿಸಿ ಮುಟ್ಟಿಸಿದ್ದು 5 ಪ್ರಕರಣಗಳಲ್ಲಿ ಮಡಿಕೇರಿ ನ್ಯಾಯಾಲಯ 5 ಮಂದಿಗೆ ರೂ. 53,000 ಸಾವಿರ ದಂಡ ವಿಧಿಸಿದೆ.ನಾಕೂರು ಶಿರಂಗಾಲ ಗ್ರಾಮದ ಆಟೋಚಾಲಕ ಬಿ.ಕೆ.ರಾಮಚಂದ್ರ ತನ್ನ ಆಟೋ (ಕೆಎ12-ಬಿ2152) ದಲ್ಲಿ ಪ್ರಯಾಣಿಕರನ್ನು ಕೂರಿಸಿ ಕೊಂಡು 7ನೇ ಹೊಸಕೋಟೆ ಬಳಿ ಚಾಲಿಸುತ್ತಿದ್ದಾಗ ಸುಂಟಿಕೊಪ್ಪ ಪೊಲೀಸರು ಪರಿಶೀಲಿಸಿದಾಗ ಮದ್ಯಸೇವನೆ ಮಾಡಿ ಆಟೋ ಚಾಲಿಸುತ್ತಿದ್ದುದು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಧೀಶರು ರೂ. 12,000 ದಂಡ ವಿಧಿಸಿದ್ದಾರೆ.ಸುಂಟಿಕೊಪ್ಪ ಪಟ್ಟಣದಲ್ಲಿ ಕೆ.ಆರ್.ನಗರದ ನಿವಾಸಿ ಚೇತನ ಎಂಬಾತ ಮೋಟಾರ್ ಬೈಕ್ (ಕೆಎ09ಇಜೆ9803)ನ್ನು ಮದ್ಯ ಸೇವಿಸಿ ಚಾಲಿಸುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಗೆ ಮಡಿಕೇರಿ ನ್ಯಾಯಾಲ ಯ ರೂ. 10,500 ದಂಡ ವಿಧಿಸಿದೆ. ಸುಂಟಿಕೊಪ್ಪ ಶಾಂತಗೇರಿ ತೋಟದ ಧನುಪಾಲ ಎಂಬಾತ ಬೈಕ್ (ಕೆಎ09-2937)ನ್ನು ಮದ್ಯಪಾನ ಮಾಡಿ ಚಾಲಿಸುತ್ತಿದ್ದಾಗ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದು ನ್ಯಾಯಾಲಯದಿಂದ ಆತನಿಗೆ ರೂ. 10,000 ದಂಡ ವಿಧಿಸಲಾಗಿದೆ.ಗದ್ದೆಹಳ್ಳದ ನಿವಾಸಿ ರಾಮು ಎಂಬಾತ ಮೋಟಾರ್‍ಬೈಕ್ (ಕೆಎ12 ಎಲ್ 5038)ನ್ನು ಮದ್ಯಸೇವಿಸಿ ಬೈಕ್ ಚಾಲಿಸುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು ನ್ಯಾಯಾಲಯ 10,000 ರೂ ದಂಡ ವಿಧಿಸಿದೆ. ಕೆ.ಆರ್.ನಗರ ನಿವಾಸಿ ಶಿವನಾಯಕ ಎಂಬಾತ ಸುಂಟಿಕೊಪ್ಪ ಪಟ್ಟಣದಲ್ಲಿ ಮೋಟಾರ್ ಬೈಕ್ (ಕೆಎ09 ಹೆಚ್‍ಎನ್ 9011)ನ್ನು ಮದ್ಯಪಾನ ಮಾಡಿ ಚಾಲಿಸುತ್ತಿದ್ದಾಗ ಪೊಲೀಸ್‍ರು ಪತ್ತೆ ಹಚ್ಚಿದ್ದು ನ್ಯಾಯಾಲಂiÀ ಆರೋಪಿಗೆ
ರೂ. 10,500 ದಂಡ ವಿಧಿಸಿದೆ.
ಇದಲ್ಲದೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲಿಸುತ್ತಿದ್ದ 60 ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ ಎಂದು ಪಿಎಸ್‍ಐ ಬಿ.ತಿಮ್ಮಪ್ಪ ತಿಳಿಸಿದ್ದಾರೆ.
ರೂ. 12 ಸಾವಿರ ದಂಡ
ಶನಿವಾರಸಂತೆ: ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯಪಾನ ಮಾಡಿ ಬೈಕ್ ಚಾಲಿಸುತ್ತಿದ್ದ ತಳಗೂರು ಗ್ರಾಮದ ವಿರೇಶ್ ಕುಮಾರ್ ಎಂಬವರಿಗೆ ಸೋಮವಾರಪೇಟೆ ಜೆಎಎಫ್‍ಸಿ ನ್ಯಾಯಾಲಯ ರೂ. 12 ಸಾವಿರ ದಂಡ ವಿಧಿಸಿದೆ.