ಕೂಡಿಗೆ, ಅ. 23: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 9ನೇ ವರ್ಷದ ತಲಕಾವೇರಿ-ಪೂಂಪ್ ಹಾರ್ ಕಾವೇರಿ ಜಾಗೃತಿ ಯಾತ್ರೆಗೆ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಸ್ವಾಗತ ಕೋರಲಾಯಿತು. ನಂತರ ದೇವಾಲಯ ಸಮಿತಿಯ ವತಿಯಿಂದ ದೇವಾಲಯದ ಮುಂಭಾಗದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಯಾತ್ರೆಗೆ ಬೀಳ್ಕೊಡಲಾಯಿತು.
ಈ ಸಂದರ್ಭ ಶ್ರೀ ರಾಮ ಲಿಂಗೇಶ್ವರ ದೇವಾಲಯದಲ್ಲಿಯೂ ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇದಿ ನದಿ ಸ್ವಚ್ಛತಾ ಆಂದೋಲನ ಹಾಗೂ ದೇವಾಲಯ ಸಮಿತಿಯ ವತಿಯಿಂದ ವಿಶೇಷ ಪೂಜೆ ಸಲ್ಲಿಸ ಲಾಯಿತು. ಪೂಜಾ ಕೈಂಕರ್ಯಗಳು ಕಣಿವೆಯ ಅರ್ಚಕರಾದ ರಾಘವೇಂದ್ರಾಚಾರ್ ಅವರ ನೇತೃತ್ವದಲ್ಲಿ ನಡೆಯಿತು.
ಪೂಜಾ ಸಂದರ್ಭ ಸನ್ಯಾಸಿ ಸಂಘದ ಉಪಾಧ್ಯಕ್ಷರಾದ ಶ್ರೀ ರಮಾನಂದ ಸ್ವಾಮೀಜಿ, ಕಾರ್ಯದರ್ಶಿ ಸ್ವಾಮಿ ಆತ್ಮಾನಂದ, ಖಜಾಂಚಿ ವೇದಾಂತ ಆನಂದ ಸ್ವಾಮೀಜಿ, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್, ಕಾರ್ಯದರ್ಶಿ ಮಾದವ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಚಂದ್ರಮೋಹನ್, ಆಂದೋಲನದ ಕಾರ್ಯದರ್ಶಿ ಡಿ.ಆರ್. ಸೋಮಶೇಖರ್, ಕೂಡಿಗೆ ಪ.ಪೂ. ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ಶಿವಾನಂದ, ಸುಂದರಾನಂದ ಸ್ವಾಮೀಜಿ, ಅಣ್ಣೈ ಜ್ಞಾನೇಶ್ವರಿ ಗಿರಿ ಮಾತಾಜಿ, ವಿದ್ಯಾಂಭ ಸರಸ್ವತಿ ಮಾತಾಜಿ, ಅರುಳ್ ವೀರಮಣಿ ಮತ್ತಿತರರು ಇದ್ದರು.