ಶ್ರೀಮಂಗಲ, ಅ. 23: : ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ, ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೆÇಮ್ಮಕ್ಕಡ ಕ್ರೀಡೆ ಸಾಂಸ್ಕೃತಿಕ ಸಂಸ್ಥೆ ಮತ್ತು ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಂಯುಕ್ತ ಆಶ್ರಯದಲ್ಲಿ ಜನೋತ್ಸವದ ರೀತಿಯಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 3ನೇ ವರ್ಷದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ 5ನೇ ದಿನದ ಕಾರ್ಯಕ್ರಮದಲ್ಲಿ ಕೊಡವ ಜಾನಪದ ಆಟ್ಪಾಟ್ ತಜ್ಞ ಕಾಳಿಮಾಡ ಮೋಟಯ್ಯ ಅವರ ನಿರ್ದೇಶನದಲ್ಲಿ ಪೆÇನ್ನಂಪೇಟೆ ಕೊಡವ ಸಮಾಜದ ಸದಸ್ಯರಿಂದ ಬೊಳಕಾಟ್, ಕತ್ತಿಯಾಟ್, ಪುತ್ತರಿ ಕೋಲಾಟ್, ಪರೆಯಕಳಿ, ಕಪ್ಪೆಯಾಟ್, ಉಮ್ಮತ್ತಾಟ್, ತಾಲಿಪಾಟ್, ಬಾಳೋಪಾಟ್ ಸೇರಿದಂತೆ 13 ಆಟ್ಪಾಟ್ ಪ್ರದರ್ಶನ ನೆರೆದಿದ್ದವರ ಮನಗೆದ್ದಿತು.
ಕೊಡವ ಸಾಂಪ್ರ್ರದಾಯಕ ಉಡುಪಿನಲ್ಲಿ ವೇದಿಕೆ ತುಂಬ ಚಿಣ್ಣರು ಸೇರಿದಂತೆ ಹಿರಿ ಕಿರಿಯ ಕಲಾವಿದರ ಕೊಡವ ಜಾನಪದ ನೃತ್ಯ ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಯಿತು. ಇದರೊಂದಿಗೆ ಚಿಮ್ಮಚ್ಚಿರ ಪವಿತಾ ರಜನ್ರವರ ಚುಟುಕ ವಾಚನ ಹಾಗೂ ಚಟ್ಟಂಡ ತನುಷ್ ತಮ್ಮಯ್ಯನ ಹಾಡುಗಾರಿಕೆ ರಂಜಿಸಿತು.
ಈ ಸಂದರ್ಭ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಬಾದುಮಂಡ ಶಂಕರು ಕಾರ್ಯಪ್ಪ, ಜಾನಪದ ತಜ್ಞ ಕಾಳಿಮಾಡ ಮೋಟಯ್ಯ, ಸಂಭ್ರಮ ಪೆÇಮ್ಮಕ್ಕಡ ಸಂಸ್ಥೆಯ ಉಪಾಧ್ಯಕ್ಷೆ ಚಂಗುಲಂಡ ಆಶ್ವಿನಿ ಸತೀಶ್ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ವಹಿಸಿದ್ದರು.
ವೇದಿಕೆಯಲ್ಲಿ ಬಾದುಮಂಡ ಶಾಂತಿ ಕಾರ್ಯಪ್ಪ, ಮಾಣೀರ ಗಗನ್ ಉಪಸ್ಥಿತರಿದ್ದರು. ಚೊಟ್ಟೇಕ್ಮಾಡ ಆಶಾ ಪ್ರಾರ್ಥಿಸಿ, ಕೊಡವ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ ಸ್ವಾಗತಿಸಿ, ಕ್ರೀಡೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ನಿರೂಪಿಸಿ ವಂದಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಸಂಜೆ 4 ಗಂಟೆಗೆ ಶ್ರೀಮಂಗಲ ಜೆ.ಸಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.