ವೀರಾಜಪೇಟೆ, ಅ. 22 ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಂ ಬಳಗ)ಯ ತಾಲೂಕು ಶಾಖೆಯ ಅಧ್ಯಕ್ಷರಾಗಿ ಟಿ.ವಿ. ಅನಿಲ್‍ಕುಮಾರ್, ಕಾರ್ಯದರ್ಶಿ ಯಾಗಿ ಅವಿನಾಶ್ ರವೀಂದ್ರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಟಿ.ವಿ. ಸಂತೋಷ್ ಕುಮಾರ್, ಮಲ್ಲಿಕಾರ್ಜುನ, ಖಜಾಂಚಿಯಾಗಿ ತಬರೇಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಸಿರ್ ಹಾಗೂ ಗೌರವ ಅಧ್ಯಕ್ಷರಾಗಿ ಎನ್.ಆರ್. ರಾಜು, ಕಾನೂನು ಸಲಹೆಗಾರರಾಗಿ ವಕೀಲ ರಫೀಕ್ ಆಯ್ಕೆಯಾಗಿದ್ದಾರೆ.