ವೀರಾಜಪೇಟೆ, ಅ. 22: ಇಂದು ಸಾಕಷ್ಟು ಅನುದಾನ ಬಿಡುಗಡೆಯಾಗು ತ್ತಿದೆ, ಇದನ್ನು ಬಳಸಿಕೊಂಡು ವಿವಿಧ ಕಡೆಯಲ್ಲಿ ಅಗತ್ಯ ಕಾಮಗಾರಿ ನಡೆಸ ಲಾಗುತ್ತಿದೆ. ಉತ್ತಮ ಕಾಮಗಾರಿ ನಡೆಯಬೇಕಾದರೆ ಆಯಾ ಗ್ರಾಮದ ಸ್ಥಳೀಯರು ಕಾಮಗಾರಿ ಉತ್ತಮ ವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.

ಕಡಂಗ ಮರೂರು ಗ್ರಾಮದ ಜೌಕಿ ಹರಿಜನ ಕಾಲೋನಿಯಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆದಮುಳ್ಳೂರು ಗ್ರಾ.ಪಂ.ನ ಕೊಟ್ಟೋಳಿ ಕಾಲೋನಿಗೆ ಸಹ ಪರಿಶಿಷ್ಠ ಜಾತಿ ಮತ್ತು ಪಂಗಡ ಉಪಯೋಜನೆ ಅಡಿಯಲ್ಲಿ ರೂ. 20 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಹಂತಹಂತವಾಗಿ ಇನ್ನು ಅಭಿವೃದ್ದಿ ಕೆಲಸವನ್ನು ಕೈಗೆತ್ತಿಕೊಳ್ಳ ಲಾಗುತ್ತದೆ ಎಂದು ಬೋಪಯ್ಯ ಹೇಳಿದರು.

ತಾಲೂಕು ಬಿಜೆಪಿ ಎಸ್.ಟಿ ಮೋರ್ಚಾದ ಅಧ್ಯಕ್ಷ ಹಾಗೂ ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಪರಮೇಶ್ವರ ಮಾತನಾಡಿದರು.

ಈ ಸಂದರ್ಭ ಕೆದಮುಳ್ಳೂರು ಗ್ರಾ ಪಂ ಸದಸ್ಯ ಬಿ.ಹೆಚ್. ಕಿರಣ್, ಜಿ.ಪಂ. ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ ಹಾಗೂ ಅಚ್ಚಪಂಡ ಮಹೇಶ್ ಗಣಪತಿ , ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸದಸ್ಯ ರಘು ನಾಣಯ್ಯ, ಪ್ರಮುಖರಾದ ಚೋಟು ಬಿದ್ದಪ್ಪ, ಜೋಕಿಂ, ಜಿ.ಪಂ., ತಾಲೂಕು ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.