ಕೂಡಿಗೆ, ಅ. 22: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾ.ಪಂ.ಯ ಕನಕ ಬಡಾವಣೆಯಲ್ಲಿ ಮಳೆಯಿಂದಾಗಿ ಎರಡು ಮನೆಯ ಗೋಡೆ ಕುಸಿದು ಬಿದ್ದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೆಬ್ಬಾಲೆ ಗ್ರಾಮದ ಕನಕ ಬಡಾವಣೆಯ ಪುಟ್ಟಯ್ಯ ಮತ್ತು ಪುರಂದರ ಎಂಬವರ ಮನೆಯ ಗೋಡೆ ಕುಸಿದು ನಷ್ಟವಾಗಿದೆ. ಸ್ಥಳಕ್ಕೆ ಹೆಬ್ಬಾಲೆ ವಿಭಾಗದ ಗ್ರಾಮ ಲೆಕ್ಕಾಧಿಕಾರಿ ಸಚಿನ್, ಗಾ.ಪಂ. ಅಭಿವೃದ್ಧಿ ಅಧಿಕಾರಿ ರಾಕೇಶ್ ಪರಿಶೀಲನೆ ನಡೆಸಿ ಮಹಜರು ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.