ಶ್ರೀಮಂಗಲ, ಅ. 22 : ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೆÇಮ್ಮಕ್ಕಡ ಕ್ರೀಡೆ-ಸಾಂಸ್ಕೃತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿಯಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಚಂಗ್ರಾಂಧಿ ಪತ್ತಲೋದಿ ಆಚರಣೆಯ ನಾಲ್ಕನೇ ದಿನವಾದ ಸೋಮವಾರ ಬೆಕ್ಕೆಸೊಡ್ಲೂರಿನ ಮಂದತವ್ವ ಟ್ರಸ್ಟ್ ಸದಸ್ಯರು ನೀಡಿದ ನೃತ್ಯ ಪ್ರದರ್ಶನ ನೆರದಿದ್ದ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ನಾಡಿನೆಲ್ಲೆಡೆ ಖ್ಯಾತಿ ಪಡೆದ ಗೆಜ್ಜೆ ತಂಡ್ ನೃತ್ಯದ 47ನೇ ಪ್ರದರ್ಶನ, ಕೊಂಡಾಡನ ಬಾರಿ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನ, ಅಜ್ಜಮಾಡ ಸಾವಿತ್ರಿ, ಚಟ್ಟಂಡ ತನುಷ್ ತಮ್ಮಯ್ಯ, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಸುಳ್ಳಿಮಾಡ ಲಾಲಿ ಸೋಮಯ್ಯನವರ ಹಾಡುಗಾರಿಕೆ ಜನರನ್ನು ರಂಜಿಸಿತು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಾನಿಗಳಾದ ಕೈಬಲೀರ ಪಾರ್ವತಿ ಬೋಪಯ್ಯ ನಾಡ್‍ತಕ್ಕ ಕೈಬಲೀರ ಹರೀಶ್ ಅಪ್ಪಯ್ಯ ಮಾತನಾಡಿದರು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯೆ ಉಳುವಂಗಡ ಬೀನ ಹರೀಶ್ ಹಾಗೂ ಮಂದತವ್ವ ಟ್ರಸ್ಟ್‍ನ ಸದಸ್ಯೆ ಸುಳ್ಳಿಮಾಡ ಲಾಲಿ ಸೋಮಯ್ಯ ಉಪಸ್ಥಿತರಿದ್ದರು. ಕಳ್ಳಿಚಂಡ ತನ್ವಿ ತಂಗಮ್ಮ ಪ್ರಾರ್ಥಿಸಿ, ಕೊಡವ ಸಮಾಜದ ನಿರ್ದೇಶಕ ಮಾಣೀರ ವಿಜಯ ನಂಜಪ್ಪ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ರವಿ ಸುಬ್ಬಯ್ಯ ನಿರೂಪಿಸಿ, ವಂದಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಪೆÇನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಗೊಳ್ಳಲಿದೆ.