ಗೋಣಿಕೊಪ್ಪಲು, ಅ. 22: ಭಾರತ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಮೂಲಕ ದೇಶದ ಕೃಷಿಯನ್ನು ತೆರಿಗೆ ಮುಕ್ತ ವ್ಯಾಪಾರ ವಲಯಕ್ಕೆ ತೆರೆದಿಡಲು ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳು ತ್ತಿದೆ. ಮುಂದುವರೆದ ದೇಶಗಳಲ್ಲಿ ಕೃಷಿಗೆ ಹೆಚ್ಚಿನ ಸಹಾಯ ಧನ ನೀಡುವರಿಂದ ಯಾಂತ್ರಿಕ ಬೆಳೆ ಪದ್ಧತಿ ಇರುವದರಿಂದ ಕಡಿಮೆ ಬೆಲೆಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಉತ್ಪನ್ನಗಳನ್ನು ತೆರಿಗೆ ಇಲ್ಲದೆ ಭಾರತಕ್ಕೆ ತಂದು ಸುರಿ ಮಾರುಕಟ್ಟೆ ಮಾಡುವ ದರಿಂದ ಇಲ್ಲಿನ ಕೃಷಿ ತೋಟಗಾರಿಕೆ, ಹೈನುಗಾರಿಕೆ ಇನ್ನೂ ನಷ್ಟವಾಗಿ ಉದ್ಯೋಗ ಕಡಿತವಾಗಲಿದೆ.
ಆರ್.ಸಿ.ಇ.ಪಿ. ಒಪ್ಪಂದವನ್ನು ಪ್ರತಿರೋಧಿಸುವ ಮೂಲಕ ಭಾರತೀಯ ರೈತರನ್ನು ಉಳಿಸುವ ಪ್ರಯತ್ನದಲ್ಲಿ ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ರೈತರಿಂದ ತಾ. 24 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಕೇಂದ್ರ ಕಚೇರಿ ಗೋಣಿಕೊಪ್ಪಲುವಿನಲ್ಲಿ ರೈತ ಪದಾಧಿಕಾರಿಗಳ, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್.ಸಿ.ಇ.ಪಿ.) ಮುಕ್ತ ವ್ಯಾಪಕ ಒಪ್ಪಂದದ ವಿರುದ್ಧ ದೇಶಾದ್ಯಂತ ಇರುವ ಜಿಲ್ಲಾ ಕೇಂದ್ರದ ಮುಂದೆ ಏಕಕಾಲದಲ್ಲಿ ರೈತ ಚಳುವಳಿಗಳು ನಡೆಯಲಿದೆ. ಭಾರತ ದೇಶದ ಎಲ್ಲಾ ನಾಗರಿಕರು, ಸಾಮಾ ಜಿಕ ಸಂಸ್ಥೆಗಳು ಮತ್ತು ಜನರ ಚಳುವಳಿಗಳು ಭಾಗವಹಿಸುತ್ತಿವೆ. ಕಾಳು ಮೆಣಸು ದರದ ಈಗಿನ ಪರಿಸ್ಥಿತಿಗೆ ಇಂತಹ ಒಪ್ಪಂದಗಳೇ ಕಾರಣವಾಗಿವೆ. ಹೊರ ದೇಶದ ಕಳಪೆ ಕಾಳುಮೆಣಸು ಭಾರತಕ್ಕೆ ಆಮದಾದ ಪರಿಣಾಮ ಕೊಡಗಿನ ರೈತರು ಇಂತಹ ಪರಿಸ್ಥಿತಿ ಎದುರಿಸ ಬೇಕಾಗಿದೆ. ಇಂತಹ ಆಮದು ನೀತಿಯನ್ನು ತಡೆಯಲು ದೇಶ ದಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜೈ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಶ್ರೀಮಂಗಲ ಹೋಬಳಿ ಸಂಚಾಲಕ ಬಾಚಮಾಡ ಭವಿ ಕುಮಾರ್, ಶೆಟ್ಟಿಗೇರಿ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ಪದಾಧಿಕಾರಿ ಮಲ್ಲೇಂಗಡ ಶಶಿ ಪೂಣಚ್ಚ ಉಪಸ್ಥಿತರಿದ್ದರು.