ಚೆಟ್ಟಳ್ಳಿ : ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮುಖ್ಯ ಕಚೇರಿಯ ಮುಂದೆ ಪ್ರತಿಷ್ಠಾಪಿಸಿರುವ ಕಾವೇರಿ ಪ್ರತಿಮೆಗೆ ಹಾಗೂ ಕಾವೇರಿ ತೀರ್ಥಕ್ಕೆ ಪೂಜೆ ಸಲ್ಲಿಸಿ ಕಾವೇರಿ ತೀರ್ಥವನ್ನು ವಿತರಿಸಲಾಯಿತು. ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸೋಮವಾರಪೇಟೆ : ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಲಕಾವೇರಿ ತೀರ್ಥವನ್ನು ಪಟ್ಟಣದಲ್ಲಿ ವಿತರಿಸಲಾಯಿತು. ಕ್ಲಬ್ ರಸ್ತೆಯಲ್ಲಿರುವ ಕಾವೇರಿ ಪ್ರತಿಮೆಗೆ ಉದ್ಯಮಿ ರವೀಂದ್ರ ಹಾಗೂ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ಪೂಜೆ ಸಲ್ಲಿಸಿ, ನಂತರ ಜೇಸಿ ವೇದಿಕೆಯ ಮುಂಭಾಗ ಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ವೀರಾಜಪೇಟೆ: ಕಾವೇರಿಯ ಪವಿತ್ರ ತೀರ್ಥವನ್ನು ನಗರದ ವಿವಿಧ ಬಡಾವಣೆಗಳಲ್ಲಿ ವಿತರಿಸಿದ ಹಿಂದೂ ಅಗ್ನಿದಳ ಕಾರ್ಯಕರ್ತರು ನಾಲ್ಕನೆ ವರ್ಷದ ಕಾರ್ಯಕ್ರಮ ಹಮ್ಮಿಕೊಂಡರು. ತೀರ್ಥವನ್ನು ನಗರದ ತೆಲುಗರ ಬೀದಿ, ಜೈನರ ಬೀದಿ ಪಂಜರ್ ಪೇಟೆ, ಮೀನುಪೇಟೆ, ಚಿಕ್ಕಪೇಟೆ ಮತ್ತು ಇತರ ಬಡಾವಣೆಗಳಲ್ಲಿ ವಿತರಣೆ ಮಾಡಲಾಯಿತು.
ಸಂಘಟನೆಯ ಪ್ರಸನ್ನ, ಜನಾರ್ಧನ ಮೂರ್ತಿ, ಟಿ.ಪಿ ಕೃಷ್ಣ, ಕೆ.ಬಿ. ಹರ್ಷವರ್ಧನ, ಕಿಶನ್, ಕುಮಾರ್, ಪ್ರದೀಪ್ ರೈ, ವಿವೇಕ್ ರೈ, ಶಿನೋಜ್, ಅರುಣಾ, ಅಯ್ಯಪ್ಪ, ಜೀವನ್ ಹಾಜರಿದ್ದರು.