ಮಡಿಕೇರಿ, ಅ. 21: ಜಿಲ್ಲೆಯಲ್ಲಿ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಕನ್ಯೆಯರ ಸಾಮೂಹಿಕ ವಿವಾಹ ನಡೆಸುವ ಮೂಲಕ ದಾಖಲೆ ಮಾಡಿರುವ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯು ಕಾಸರಗೋಡಿನ ಸಿಟಿಗೋಲ್ಡ್ ಪ್ರಾಯೋಜಕತ್ವದಲ್ಲಿ ಮಧ್ಯಂತರ ಸಾಮೂಹಿಕ ವಿವಾಹ ನಡೆಸಲು ಅರ್ಹ ಬಡ ಮುಸ್ಲಿಂ ಹೆಣ್ಣುಮಕ್ಕಳಿಂದ ಅರ್ಜಿ ಆಹ್ವಾನಿಸಿದೆ.
ಈ ಸಾಮೂಹಿಕ ವಿವಾಹವು ಕಾಸರಗೋಡಿನಲ್ಲಿ ನಡೆಯಲಿದ್ದು, ಅಲ್ ಅಮೀನ್ ಸಂಸ್ಥೆಯ ಉಸ್ತುವಾರಿಯಲ್ಲಿ ವಿವಾಹದ ಸಂಪೂರ್ಣ ಖರ್ಚನ್ನು ಸಿಟಿ ಗೋಲ್ಡ್ ಸಂಸ್ಥೆ ನಿರ್ವಹಿಸಲಿದೆ. ಅರ್ಹ ಪೋಷಕರು ಹೆಚ್ಚಿನ ಮಾಹಿತಿಗೆ ಈ ಮುಂದಿನ ಸಂಖ್ಯೆಯಲ್ಲಿ ಸಂಪರ್ಕಿಸಿ.
9902108658 (ಎಫ್.ಎ. ಮೊಹಮದ್ ಹಾಜಿ), 7019095426 (ಅಬ್ದುಲ್ ಲತೀಫ್ ಹಾಜಿ) ಅರ್ಜಿಗಳನ್ನು ಅಧ್ಯಕ್ಷರು, ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ, ಕನಕದಾಸ ರಸ್ತೆ, ಮಡಿಕೇರಿ ಈ ವಿಳಾಸಕ್ಕೆ ತಲಪಿಸುವಂತೆ ಕೋರಲಾಗಿದೆ.