ಗೋಣಿಕೊಪ್ಪಲು, ಅ. 20: ಕಳೆದ 11 ವರ್ಷಗಳಿಂದ ಕೊಡಗಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ಕೊಡವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವ ಕೊಡವ ದೀನ ಬಂಧು ಚಾರಿಟೆಬಲ್ ಟ್ಟಸ್ಟ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ 97 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸ ಲಾಯಿತು. ಈ ಸಂದರ್ಭ ಟ್ರಸ್ಟ್‍ನ ಅಧ್ಯಕ್ಷ ಕಟ್ಟೇರ ಎ. ಕಾರ್ಯಪ್ಪ, ಕಾರ್ಯದರ್ಶಿ ಪಟ್ಟಡ ಎ. ಜಯ ಕುಮಾರ್ ಸದಸ್ಯರಾದ ಚಂಬಂಡ ಸೋಮಣ್ಣ, ಪಟ್ಟಮಾಡ ಶಾಂತಿ ಗಣಪತಿ, ಕಾಲೇಜು ಪ್ರಾಂಶುಪಾಲರು ಗಳಾದ ಪ್ರೊ.ಕೆ.ವಿ. ಕುಸುಮಾಧರ್ ಹಾಗೂ ಎಸ್.ಎಸ್. ಮಾದಯ್ಯ ಉಪಸ್ಥಿತರಿದ್ದರು.