ವೀರಾಜಪೇಟೆ, ಅ. 20: ವಿ.ಬಾಡಗದ ರೈತರಿಗೆ ಕಳೆದ ಸಾಲಿನ ಮಳೆಗೆ ಕೃಷಿ ಫಸಲು ನಾಶವಾಗಿ ತೀರಾ ಅರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಗ್ರಾಮದವರನ್ನು ಪರಿಹಾರ ಪಟ್ಟಯಿಂದ ಕೈ ಬಿಟ್ಟಿರುವದು ನೋವು ತಂದಿದೆ. ಗ್ರಾಮವನ್ನು ಅಧಿಕೃತವಾಗಿ ಪರಿಹಾರ ಪಟ್ಟಿಯಲ್ಲಿ ಸೇರಿಸಿ ಸೂಕ್ತ ಪರಿಹಾರ ನೀಡಬೇಕು, ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ ಎಂದು ವಿ.ಬಾಡಗ ಗ್ರಾಮದ ಹಿರಿಯ ರೈತ ತೀತಿಮಾಡ ಶಂಕರಿ ಅಪ್ಪಯ್ಯ ತಿಳಿಸಿದ್ದಾರೆ.
ಕಳೆದ ಬಾರಿ 225 ಇಂಚು ವರ್ಷಂತ್ಯಾದವರಗೆ ದಾಖಲಾಗಿದೆ, ಈ ಬಾರಿ ಇಂದಿಗೆ 217 ಇಂÀಚು ಮಳೆಯಾಗಿದೆ. ಆದರೆ ಕಳೆದ ಸಾಲಿನಂತೆ 19 - 20 ಸಾಲಿನಲ್ಲಿಯೂ ಅಧಿಕಾರಿಗಳು ನಮ್ಮನ್ನು ವಂಚಿಸಲು ಹೊರಟಿದ್ದು, ಕೃಷಿ ಇಲಾಖೆಯ ಹಾಗೂ ಕಂದಾಯ ಇಲಾಖೆಗಳ ಬೇಜವಾಬ್ದಾರಿ ಇದಕ್ಕೆ ಕಾರಣವಾಗಿದೆ. ದಾಖಲೆ ಸರಿ ಇಲ್ಲ ಅದು ಇದು ಎಂದು ವಂಚಿಸದೆ ರೈತರಿಗೆ ಸೂಕ್ತ ನಷ್ಟ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಗೋಷ್ಠಿಯಲ್ಲಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, , ಚೆಮೀರ ಪ್ರಕಾಶ್ ಪೂವಯ್ಯ, ತೀತಿಮಾಡ ಪ್ರಧಾನ್ ಚಂಗಪ್ಪ ಉಪಸ್ಥಿತರಿದ್ದರು.