ಗೋಣಿಕೊಪ್ಪಲು,ಅ.20: ಪೆÇನ್ನಂಪೇಟೆಯಲ್ಲಿ ನಿರ್ಮಾಣ ಗೊಂಡಿರುವ ಶ್ರೀ ರಾಮಕೃಷ್ಣ ವಿಶ್ವ ಭಾವೈಕ ಮಂದಿರದ ದಶಮಾನೋತ್ಸವ ಇತ್ತೀಚೆಗೆ ಅರ್ಥಪೂರ್ಣವಾಗಿ ಜರುಗಿತು. ಮೂರು ದಿನಗಳ ಆಧ್ಯಾತ್ಮಿಕ ಶಿಬಿರವನ್ನು ಆಯೋಜಿಸಲಾಗಿತ್ತು. ರಾಮಕೃಷ್ಣ ಮಠದ ಸ್ವಾಮಿ ರಾಘವೇಶಾನಂದಜಿ, ನಿತ್ಯಸ್ಥಾನಂದಜಿ, ದಯಾತ್ಮಾನಂದಜಿ, ಮುಕ್ತಿದಾನಂದಜಿ ಮತ್ತಿತರರು ಶಿಬಿರದಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ಶಾಂಭವಿ ವಿಜಯ( ದೇವಿಮಹಾತ್ಮೆ) ಯಕ್ಷಗಾನವು ಮನಸೂರೆಗೊಂಡಿತು. ಗೋಣಿಕೊಪ್ಪಲು ತುಳುವೆರ ಜನಪದ ಕೂಟದ ಸ್ಥಾಪಕ ಸಂಚಾಲಕ ಕೆ.ಆರ್.ಬಾಲಕೃಷ್ಣ ರೈ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.

ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ್, ಡಾ. ಕೆ.ಕೆ.ಶಿವಪ್ಪ ಹಾಗೂ ರಂಗಕಲಾವಿದ ಅಡ್ಡಂಡ ಕಾರ್ಯಪ್ಪ ಪಾಲ್ಗೊಂಡಿದ್ದರು.