ಕಡಂಗ, ಅ. 20: ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮುಸ್ಲಿಂ ಜಮಾಅತ್ ಕಡಂಗ ಯುಎಇ ಶಾಖೆ ಇದರ ವಾರ್ಷಿಕ ಮಹಾ ಸಭೆಯು ಶಾರ್ಜಾ ರೋಲದಲ್ಲಿ ಅಧ್ಯಕ್ಷ ಜನಾಬ್ ಹಂಸ ಎಂ.ಎ. ಅಧ್ಯಕ್ಷತೆಯಲ್ಲಿ ನಡೆಯಿತು.
ಮಜೀದ್ ಸಅದಿ ಉಸ್ತಾದ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು ಕಳೆದ ಶಾಲಿನ ವರದಿಯನ್ನು ಕಾರ್ಯದರ್ಶಿ ಅಶ್ರಫ್ ಸಿ.ಎ. ಮಂಡಿಸಿದರು. ನಂತರ ಹೊಸ ಆಡಳಿತ ಮಂಡಳಿ ರಚಿಸಲಾಯಿತು.
ಅಧ್ಯಕ್ಷರಾಗಿ ಹಂಸ ಎಂ.ಎ., ಉಪಾಧ್ಯಕ್ಷರಾಗಿ ಮಜೀದ್ ಸಅದಿ, ಮಹಮೂದ್ ಸಅದಿ,ಅಶ್ರಫ್ ಸೈಟ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಸಿ.ಎ., ಕೋಶಾಧಿಕಾರಿಯಾಗಿ ಮುಜೀಬ್ ಟಿ.ಕೆ. ಆಯ್ಕೆ ಆದರು. ರಶೀದ್ ಅಶ್ರಫಿ ಉಸ್ತಾದ್ ಸ್ವಾಗತಿಸಿ, ಮಹಮೂದ್ ಸಅದಿ ಉಸ್ತಾದ್ ವಂದಿಸಿದರು. ಸಭೆಗೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಲಾಯಿತು.
- ವರದಿ : ನೌಫಲ್, ಕಡಂಗ