ಗುಡ್ಡೆಹೊಸೂರು, ಅ. 20: ಇಲ್ಲಿನ ರಾಮ್ ದೇವಯ್ಯ ಕುಟುಂಬ ನಡೆಸುತ್ತಿರುವ ದೇವಸ್ಥಾನ ಆವರಣದಲ್ಲಿ ತಲಕಾವೇರಿಯಿಂದ ತಂದ ಕಾವೇರಿ ತೀರ್ಥವನ್ನು ಅಲ್ಲಿನ ಶ್ರೀ ಮುನೇಶ್ವರ, ಶ್ರೀ ಚಾಮುಂಡೇಶ್ವರಿ, ಶ್ರೀ ನಾಗದೇವರು ಮತ್ತು ಗುಳಿಗ ಆವರಣದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು. ಇಲ್ಲಿನ ಶ್ರೀ ಬಿಲ್ವಾಶ್ವತ್ಥ ಕ್ಷೇತ್ರದಲ್ಲಿ ನವರಾತ್ರಿಯ 9 ದಿನಗಳ ಕಾಲ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಅಲ್ಲದೆ ವಿಶೇಷವಾಗಿ ಪೂಜಾ ಕಾರ್ಯಗಳನ್ನು ಇಲ್ಲಿ ನೆರವೇರಿಸಲಾಗುತ್ತಿದೆ. ತಾ. 18 ರಂದು ನಡೆದ ಈ ಪೂಜಾ ಕಾರ್ಯದಲ್ಲಿ ಭಕ್ತರು ಹಾಜರಿದ್ದರು. ಅರ್ಚಕ ಗಣಪತಿ ಭಟ್ ಪೂಜೆ ನೆರವೇರಿಸಿದರು.