ವೀರಾಜಪೇm,É ಅ. 19: ಪರಿಶಿಷ್ಟರ ರಕ್ಷಣೆಯ ಶಾಸನಕ್ಕೆ ಸುಪ್ರೀಂಕೋರ್ಟ್ ಮರುಜೀವ ನೀಡಿ ಹೊರಡಿಸಿರುವ ತೀರ್ಪನ್ನು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸ್ವಾಗತಿಸುವದಾಗಿ ಸಂಘಟನೆ ಜಿಲ್ಲಾ ಸಂಚಾಲಕ ಎಚ್.ಆರ್. ಪರಶುರಾಮ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟರ ದೌರ್ಜನ್ಯ ತಡೆ ಕಾಯಿದೆಗೆ ಇದರಿಂದ ಪುಷ್ಟೀಕರಿಸಿದಂತಾಗಿದ್ದು, ಇದು ಜಾತಿ ಸಮಸ್ಯೆ ಅಲ್ಲ; ಮಾನವೀಯ ವೈಫಲ್ಯ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್ನ ತ್ರಿ ಸದಸ್ಯ ಪೀಠದ ಈ ತೀರ್ಪಿನಿಂದ ರಕ್ಷಣೆಯ ಶಾಸನಕ್ಕೆ ಮರುಜೀವ ಬಂದಿದೆ. ಇನ್ನು ಮುಂದೆ ಪರಿಶಿಷ್ಟ ವರ್ಗದವರಿಗೆ ಪೂರ್ಣ ರಕ್ಷಣೆ ದೊರೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘಟನೆಯ ವಿಭಾಗೀಯ ಸಂಚಾಲಕ ಎಚ್.ಎಸ್. ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ವಿ.ಆರ್. ರಜನಿಕಾಂತ್, ಸಂಘಟನೆಯ ಕಾರ್ಯಕರ್ತರುಗಳಾದ ವಸಂತ್, ಗಣೇಶ್ ಹಾಜರಿದ್ದರು.