ಶ್ರೀಮಂಗಲ, ಅ. 19: ಕೊಡವ ಜನಾಂಗದ ಪದ್ಧತಿ ಸಂಸ್ಕøತಿ, ಆಚಾರ ವಿಚಾರ, ಹಾಗೂ ಹಬ್ಬ ಹರಿದಿನಗಳ ಬಗ್ಗೆ ಯುವ ಜನಾಂಗಕ್ಕೆ ಮಾಹಿತಿ ನೀಡಿ ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕಳೆದ 2 ವರ್ಷಗಳಿಂದ ಆರಂಭಿಸಿದ ಈ ಚಂಗ್ರಾಂದಿ ಪತ್ತಾಲೋದಿ ಆಚರಣೆಗೆ ವಿವಿಧ ಕೊಡವ ಸಮಾಜ, ಸಂಘ ಸಂಸ್ಥೆಗಳು ಹಾಗೂ ಕೊಡವ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಹರ್ಷ ವ್ಯಕ್ತಪಡಿಸಿದರು. ಟಿ.ಶೆಟ್ಟಿಗೇರಿಯಲ್ಲಿ ಇರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಹಕಾರದಲ್ಲಿ ನಡೆದ ಚಂಗ್ರಾಂದಿ ಪತ್ತಾಲೋದಿ ಆಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಮೂರನೆಯ ವರ್ಷದ ಈ ಚಂಗ್ರಾಂದಿ ಪತ್ತಲೋದಿ ಆಚರಣೆಯನ್ನು ಇಂದಿನಿಂದ 10 ದಿನಗಳವರೆಗೆ ಜನೋತ್ಸವದ ರೀತಿಯಲ್ಲಿ ಆಚರಿಸಲಾಗುವದೆಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ಚಂಗ್ರಾಂದಿ ಪತ್ತಲೋದಿಯಂತಹ ಕಾರ್ಯಕ್ರಮಗಳಿಂದ ಜನಾಂಗದ ಭಾಷೆ ಸಾಹಿತ್ಯ ಸಂಸ್ಕøತಿ ಉಳಿಯಲು ಸಾಧÀ್ಯ ಇದಕ್ಕೆ ಎಲ್ಲರು ಸಹಕಾರ ನೀಡಬೇಕೆಂದರು.
ಮತ್ತೋರ್ವ ಮುಖ್ಯ ಅತಿಥಿ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ನಿರ್ದೇಶಕ ಮಾಣೀರ ವಿಜಯ ನಂಜಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳಿಗೆ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರೊಂದಿಗೆ ಸಹಕಾರ ನೀಡಿದರೆ ಕೊಡವ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಹಕಾರವಾಗುತ್ತದೆ ಎಂದರು.
ಬೆಳಿಗ್ಗೆ 10 ಗಂಟೆಗೆ ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿಯ ಸದಸ್ಯರು ತಲಕಾವೇರಿಯಿಂದ ತಂದ ಕಾವೇರಿ ತೀರ್ಥವನ್ನು ಪೂಜಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು. ಸಂಜೆ 4 ಗಂಟೆಗೆ ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ನಿರ್ದೇಶನದಲ್ಲಿ, ಉಪನ್ಯಾಸಕಿ ಕಂಬೀರಂಡ ಅಂಬಿಕಾ ಸಹಕಾರದಲ್ಲಿ ನಡೆದ ಕಾವೇರಿ ದರ್ಶನ ನೃತ್ಯರೂಪಕ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು.
ಸಭಾ ಕಾರ್ಯಕ್ರಮದಲ್ಲಿ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಕ್ರೀಡೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಸ್ವಾಗತಿಸಿ, ಕಾರ್ಯದರ್ಶಿ ಮನ್ನೇರ ರಮೇಶ್ ವಂದಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಅಪರಾಹ್ನ 3 ಗಂಟೆಯಿಂದ ಚಂಗ್ರಾಂದಿ ವಿಶೇಷ ಖಾದ್ಯವಾದ ದೋಸೆಪುಟ್ಟ್ ಕುಂಬಳ ಕರಿ ತಯಾರಿಸುವ ಸ್ಪಧೆರ್É ಹಾಗೂ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.