ಸೋಮವಾರಪೇಟೆ,ಅ.20: ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಸ್ಥಾಪಿತಗೊಂಡಿರುವ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ತಾ.22ರಂದು ಮಾನಸ ಸಭಾಂಗಣದಲ್ಲಿ ರೈತರಿಗೆ ವ್ಯವಸಾಯ ಜಾಗೃತಿ ಸಭೆಯನ್ನು ಬೆಳಿಗ್ಗೆ 10ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ದೇವಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಕೃಷಿಗೆ ಅಗತ್ಯವಿರುವ ಪರಿಕರಗಳು ಹಾಗೂ ಕೃಷಿ ಉಪಕರಣಗಳು, ರಾಸಾಯನಿಕ, ಸಾವಯವ ಗೊಬ್ಬರಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.

ಯಾರಾ, ಡಿಸೈನ್ ಬಯೋಸಿಸ್, ದಿ ಫಾರ್ಮರ್, ಆದಿ ಪೆಪ್ಪರ್ ಸಂಸ್ಥೆಗಳ ವಿಷಯ ತಜ್ಞರು ಸಭೆಯಲ್ಲಿ ಭಾಗವಹಿಸಿ, ರೈತರಿಗೆ ಸೂಕ್ತ ಮಾಹಿತಿ ನೀಡಲಿ ದ್ದಾರೆ. ಸೋಮ ವಾರಪೇಟೆ, ಸುಂಟಿಕೊಪ್ಪ, ಶಾಂತಳ್ಳಿ ಹೋಬಳಿಗಳ ರೈತರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಬನ್ನಳ್ಳಿ, ಉಪಾಧ್ಯಕ್ಷ ರತೀಶ್, ನಿರ್ದೇಶಕರುಗಳಾದ ಜೋಯಪ್ಪ, ಡಿ.ಡಿ.ಸುಜಾತ, ಸಿ.ಇ.ಒ. ರವಿಕುಮಾರ್ ಇದ್ದರು.