ವೀರಾಜಪೇಟೆ, ಅ. 19: ವೀರಾಜಪೇಟೆ ದೊಡ್ಡಟ್ಟಿ ಚೌಕಿ ಬಳಿ ಬೀಡ ಅಂಗಡಿಯಲ್ಲಿ ಮೊಬೈಲ್ ಫೋನ್‍ನಲ್ಲಿ ಒಂದಂಕಿ ಲಾಟರಿ ದಂಧೆ ನಡೆಸುತ್ತಿದ್ದ ಶಬೀರ್ ಹಾಗೂ ಪ್ಯಾಟ್ರಿಕ್ ಎಂಬಿಬ್ಬರನ್ನು ಬಂಧಿಸಿರುವ ಇಲ್ಲಿನ ನಗರ ಪೊಲೀಸರು ಮೊಬೈಲ್ ಸಮೇತ ರೂ. 1590 ನಗದನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಲಾಟರಿ ಟಿಕೇಟುಗಳ ಸಂಖ್ಯೆಯನ್ನು ಆಧರಿಸಿ ಒಂದಂಕಿ ಮೇಲೆ ಪಣವಿಟ್ಟು ಜೂಜಾಡುತ್ತಿದ್ದರೆಂದು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಬೀಡ ಅಂಗಡಿಯ ಮೇಲೆ ದಾಳಿ ಸಂದರ್ಭದಲ್ಲಿ ನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮರಿಸ್ವಾಮಿ, ಪೊಲೀಸ್ ಕಾನ್ಸ್‍ಟೇಬಲ್ ಗಿರೀಶ್, ಮುನೀರ್, ಸುನಿಲ್ ಹಾಗೂ ಕಾವೇರಮ್ಮ ಭಾಗಿಯಾಗಿದ್ದರು.

ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಅಕ್ರಮ ಲಾಟರಿ ದಂಧೆ ಸಂಬಂಧ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಸುಮಾರು ಆರು ಪ್ರಕರಣಗಳು ದಾಖಲಾಗಿವೆ.