ಶನಿವಾರಸಂತೆ, ಅ. 19: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಯೊಬ್ಬರಿಗೆ ವಿಷಪೂರಿತ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಅವರೆದಾಳು ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ರೈತ ಎಂ.ಆರ್. ಅಣ್ಣೇಗೌಡ ಅವರ ಪತ್ನಿ ಗೌರಮ್ಮ (49) ಮೃತಪಟ್ಟ ಮಹಿಳೆ. ಮನೆಯ ಪಕ್ಕದಲ್ಲಿ ರುವ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿ ದ್ದಾಗ ಎಡಗಾಲಿನ ಹಿಮ್ಮಡಿ ಗಂಟಿಗೆ ಹಾವು ಕಚ್ಚಿದ್ದು, ಅಸ್ವಸ್ಥರಾದ ಇವರನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿ ತಾದರೂ ಪರೀಕ್ಷಿಸಿದ ವೈದ್ಯರು ಗೌರಮ್ಮ ಮೃತ ಪಟ್ಟಿರುವದಾಗಿ ತಿಳಿಸಿದರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.