ಮಡಿಕೇರಿ, ಅ. 19: ಹಿಂದೂ ಮಲಯಾಳಿ ಸಮಾಜ ಬಾಂಧವರನ್ನು ಒಗ್ಗೂಡಿಸಿ, ಆಚಾರ ವಿಚಾರ, ಸಂಸ್ಕøತಿಗಳನ್ನು ಸಂರಕ್ಷಿಸಿ ಯುವ ಪೀಳಿಗೆಗೆ ತಿಳಿಹೇಳುವ ಉದ್ದೇಶ ದಿಂದ ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ನ. 3 ರಂದು ಓಣಂ ಹಬ್ಬವನ್ನು ನಗರದ ಕ್ರಿಸ್ಟಲ್ ಹಾಲ್ನಲ್ಲಿ ನಡೆಸಲಾಗುವದು ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಓಣಂ ಹಬ್ಬದ ಪ್ರಯುಕ್ತ ನ. 3 ರಂದು ಓಣಾ ಘೋಷಂ ಮತ್ತು ಓಣಂ ಸದ್ಯವನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8 ಗಂಟೆಗೆ ನಗರದ ಕೆ.ಎಸ್.ಆರ್.ಟಿ.ಸಿ. ಡಿಪ್ಪೋ ಬಳಿ ಇರುವ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ (4*4 ಚೌಕಾಕಾರದಲ್ಲಿ) ಹೂವಿನ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ 12.30ಕ್ಕೆ ಓಣಂ ಸದ್ಯ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಮಾಜ ಬಾಂಧವ ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಒಬ್ಬರಿಗೆ ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.
ಜಿಲ್ಲಾ ಮಟ್ಟದ ಗ್ರೂಪ್ ಡ್ಯಾನ್ಸ್ - ಈ ಬಾರಿ ವಿಶೇಷವಾಗಿ ಜಿಲ್ಲಾ ಮಟ್ಟದ ಗ್ರೂಪ್ ಡ್ಯಾನ್ಸ್ ಆಯೋಜಿಸಲಾಗಿದ್ದು, ಒಂದು ಗುಂಪು 2 ರಿಂದ 10 ಮಂದಿಯ ಒಳಗಿರಬೇಕು. ಒಂದು ತಂಡಕ್ಕೆ 5 ನಿಮಿಷಗಳ ಕಾಲಾವಕಾಶವಿದ್ದು, ಹಿಂದೂ ಮಲಯಾಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಿಗಳಿಗೆ ವಯಸ್ಸಿನ ಮಿತಿ ಇರುವದಿಲ್ಲ, ಸ್ಪರ್ಧೆಯಲ್ಲಿ ವಿಜೇತವಾದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವದು. ನೃತ್ಯ ತಂಡದ ಹೆಸರು ನೋಂದಾಯಿಸಲು ಅ. 26 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಧರ್ಮೇಂದ್ರ-9481069188, ಸುಬ್ರಮಣಿ -9900392332 ಸಂಪರ್ಕಿಸ ಬಹುದಾಗಿದೆ.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವು- ಮುಂಗಾರಿನ ಮಹಾ ಮಳೆಗೆ ಮನೆಯನ್ನು ಕಳೆದುಕೊಂಡ ಕೆಲ ಸಂಘದ ಸದಸ್ಯರುಗಳಿದ್ದು, ಇಂತಹವರಿಗೆ ಸಮಾರಂಭದಲ್ಲಿ ಧನ ಸಹಾಯ ಮಾಡಲಾಗುತ್ತದೆ. ಈ ಬಗ್ಗೆ ಅಗತ್ಯ ಮಾಹಿತಿಗಳೊಂದಿಗೆ ಸಂತ್ರಸ್ತ ಸದಸ್ಯರು ಸಂಘದ ಕಚೇರಿಗೆ ಅಥವಾ 9481069188, 9900392332ಗೆ ಸಂಪರ್ಕಿಸ ಬಹುದುದಾಗಿದೆ. ಈಗಾಗಲೇ ಮನೆ ಕಳೆದುಕೊಂಡ 6 ಸದಸ್ಯರ ಪಟ್ಟಿ ಬಂದಿರುವದಾಗಿ ತಿಳಿಸಿದರು.
ಸನ್ಮಾನ - 2017-18 ಮತ್ತು 2018-19ನೇ ಸಾಲಿನಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ನಗದು ಮತ್ತು ಪಾರಿತೋಷಕ ನೀಡಿ ಸನ್ಮಾನಿಸಲಾಗುವದು. ಅರ್ಹರು ಅಂಕ ಪಟ್ಟಿಯ ಪ್ರತಿ ಮತ್ತು ವಿವರಗಳೊಂದಿಗೆ ನಗರದ ಓಂಕಾರೇಶ್ವರ ದೇವಸ್ಥಾನದಲ್ಲಿರುವ ಸಂಘದ ಕಚೇರಿಗೆ ತಾ.26ರ ಒಳಗೆ ತಲಪಿಸತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ 9449292643, 9900126664, 9448370993 ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಬಿ. ಭರತ್, ಪ್ರಚಾರ ಸಮಿತಿ ಅಧ್ಯಕ್ಷ ರವಿ ಅಪ್ಪುಕುಟ್ಟನ್, ಪ್ರಧಾನ ಕಾರ್ಯದರ್ಶಿ ಕೆ.ವಿ. ಧರ್ಮೇಂದ್ರ, ಖಾಜಾಂಚಿ ಪಿ.ಟಿ. ಉತ್ತಮ್ ಹಾಗೂ ಗೌರವ ಸಲಹೆಗಾರ ಟಿ.ಎ. ಮನೋರಂಜನ್ ಉಪಸ್ಥಿತರಿದ್ದರು.