ಶನಿವಾರಸಂತೆ, ಅ. 19: ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಮಾಸಿಕ ಸಭೆ ಸಂಸ್ಥೆಯ ಕಚೇರಿಯಲ್ಲಿ ಅಧ್ಯಕ್ಷ ಲಯನ್ಸ್ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಎಂ.ಆರ್. ನಿರಂಜನ್ ಮಾತನಾಡಿ, ಕಳೆದ ತಿಂಗಳಿನಲ್ಲಿ ನಡೆದ ವಿಶ್ವ ಛಾಯಾಗ್ರಾಹಕರ ದಿನಾಚರಣೆ, ಶಿಕ್ಷಕರ ದಿನಾಚರಣೆ, ಇಂಟರ್ ನ್ಯಾಷನಲ್ ಕಾಫಿ ಡೇ ನಡೆಸಿದ ವಿಚಾರದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಖಜಾಂಚಿ ಬಿ.ಕೆ. ಚಿಣ್ಣಪ್ಪ ಕಳೆದ ಸೆಪ್ಟೆಂಬರ್ ತಿಂಗಳ ಜಮೆ-ಖರ್ಚಿನ ವಿವರ ಸಭೆಗೆ ಮಂಡಿಸಿದರು. ಮುಂದಿನ ದಿನಗಳಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯುಷ್‍ಮಾನ್ ಭಾರತ್ ಅಭಿಯಾನ, ಸಸಿ ನೆಡುವ ಕಾರ್ಯಕ್ರಮಕ್ಕೆ ಸದಸ್ಯರ ಸಹಕಾರ ಕೋರಿದರು. ತಾ. 18 ರಂದು ಜಿಲ್ಲಾ ಲಯನ್ಸ್ ವತಿಯಿಂದ ಮೈಸೂರಿನಲ್ಲಿ ನಡೆಯಲಿರುವ ಕ್ಲಬ್ ಕ್ವಾಲಿಟಿ ಇಲಿಸ್ಪೆಷನ್ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, 1ನೇ ಉಪಾಧ್ಯಕ್ಷರು ಭಾಗವಹಿಸುವ ಬಗ್ಗೆ ಸಭೆಯಲ್ಲಿ ಸದಸ್ಯರುಗಳಿಗೆ ತಿಳಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಬಿ.ಸಿ. ಧರ್ಮಪ್ಪ, ಜಿ. ನಾರಾಯಣ ಸ್ವಾಮಿ, ಲಯನ್ಸ್ ಸದಸ್ಯರುಗಳಾದ ಕೆ.ಎಂ. ಜಗನ್‍ಪಾಲ್, ಟಿ.ಆರ್. ಕೇಶವ, ಜಿ.ಪಿ. ಪುಟ್ಟಪ್ಪ, ಪರಮೇಶ್, ಕಿರಣ್, ಯೋಗೇಶ್, ನರೇಶ್‍ಚಂದ್ರ ಇತರರು ಉಪಸ್ಥಿತರಿದ್ದರು.

ಜಗನ್‍ಪಾಲ್ ಧ್ವಜವಂದನೆ ಮಾಡಿದರೆ, ನಿರಂಜನ್ ಸ್ವಾಗತಿಸಿ, ನಾರಾಯಣ ಸ್ವಾಮಿ ನಿರೂಪಿಸಿ, ವಂದಿಸಿದರು.