ಮಡಿಕೇರಿ, ಅ. 19: ಕೇಂದ್ರ ಜಾಗೃತ ಆಯೋಗದ ನಿರ್ದೇಶನದಂತೆ ತಾ. 28 ರಿಂದ ನವೆಂಬರ್ 2 ರವರೆಗೆ ವಿಚಕ್ಷಣ ಅರಿವು ಸಪ್ತಾಹ ಆಚರಿಸಲಿದ್ದು, ಕಾರ್ಪೊರೇಶನ್ ಬ್ಯಾಂಕ್, ಲೀಡ್ ಬ್ಯಾಂಕ್ ವತಿಯಿಂದ ತಾ. 23 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ‘ಪ್ರಾಮಾಣಿಕತನ-ಬದುಕಿನ ಹಾದಿ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್, ಇತರರು ಪಾಲ್ಗೊಳ್ಳಲಿದ್ದಾರೆ. ಅಂದು ವಿದ್ಯಾರ್ಥಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದು, ವಿಚಾರಗೋಷ್ಠಿಯನ್ನು ಯಶಸ್ವಿಗೊಳಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೋರಿದ್ದಾರೆ.