ಮಡಿಕೇರಿ, ಅ. 19: ಕಾನೂನುಮಾಪನ ಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ. 31 ರವರೆಗೆ ಮಾರಿಯಮ್ಮ ದೇವಸ್ಥಾನದ ಪಕ್ಕ ಮಡಿಕೇರಿ ರಸ್ತೆ, ಬೈಚನಹಳ್ಳಿ-ಕುಶಾಲನಗರದಲ್ಲಿ ಏರ್ಪಡಿಸಲಾಗಿದೆ. ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.