ಮಡಿಕೇರಿ, ಅ. 19: ಗುಹ್ಯ ಶ್ರೀ ಅಗಸ್ತ್ಯೇಶ್ವರ ಮಹಾದೇವರ ದೇವಸ್ಥಾನ ಟ್ರಸ್ಟ್ ವತಿಯಿಂದ ತಾ. 24 ರಂದು ದೀಪಾವಳಿ ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ಪ್ರಾರ್ಥನೆ, 9.30 ಕ್ಕೆ ಶ್ರೀ ಗಣ ಹೋಮದೊಂದಿಗೆ 10.30 ಗಂಟೆಗೆ ಶ್ರೀ ಸತ್ಯನಾರಾಯಣ ದೇವರ ಪೂಜೆ-ಪ್ರಸಾದ, ಮಧ್ಯಾಹ್ನ 1 ಗಂಟೆಗೆ ಭೋಜನ ಏರ್ಪಡಿಸಲಾಗಿದೆ. ಅಂದು ಸಾಯಂಕಾಲ 6.30 ಗಂಟೆಗೆ ಉತ್ಸವ ಪ್ರಾರ್ಥನೆ, 7 ಗಂಟೆಗೆ ಭಂಡಾರ ತರುವದು, ಬಳಿಕ ಉತ್ಸವ ಪ್ರಾರಂಭ. ತಾ. 25 ರಂದು ಬೆಳಿಗ್ಗೆ ಬಲಿ 5.30 ಗಂಟೆಗೆ ಪ್ರಾರಂಭ. ಮಧ್ಯಾಹ್ನ ಪೂಜೆ, ಪ್ರಸಾದ, ಸಾಯಂಕಾಲ 7 ಗಂಟೆಗೆ ಬಲಿ, ನಂತರ ಸಾಯಂಕಾಲದ ಪೂಜೆ-ಪ್ರಸಾದ.

ತಾ. 26 ರಂದು ಬೆಳಿಗ್ಗೆ 5.30 ಕ್ಕೆ ಬಲಿ, ನಂತರ ಪೂಜೆ, ಮಧ್ಯಾಹ್ನ ಪೂಜೆ-ಪ್ರಸಾದ, ಸಾಯಂಕಾಲ 7 ಗಂಟೆಗೆ ಬಲಿ, ನಂತರ ಸಾಯಂಕಾಲದ ಪೂಜೆ-ಪ್ರಸಾದ. ತಾ. 27 ರಂದು ಬೆಳಿಗ್ಗೆ 5.18 ಕ್ಕೆ ತೈಲಾಭ್ಯಂಜನಾ ನಂತರ ಬೆಳಿಗ್ಗೆ ಬಲಿ 6.30 ಕ್ಕೆ. ನಂತರ ಪೂಜೆ, ಪ್ರಸಾದ. ಮಧ್ಯಾಹ್ನ ಅನ್ನಸಂತರ್ಪಣೆ ಪೂಜೆ, ಪ್ರಸಾದ, ಸಾಯಂಕಾಲ 7 ಗಂಟೆಗೆ ದೀಪ ನೆರಪು ಬಲಿ ಉತ್ಸವ ಕಳೆದು ಶ್ರೀ ರಂಗಪೂಜೆ ಕಾರ್ಯಕ್ರಮ ಇರುತ್ತದೆ. ರಾತ್ರಿ ಪೂಜೆ ಪ್ರಸಾದ ಬಳಿಕ ಭೋಜನ ವ್ಯವಸ್ಥೆ ಇರುತ್ತದೆ. ಸಾಯಂಕಾಲ ವಸಂತ ಪೂಜೆ.

ತಾ. 28 ರಂದು ಮಧ್ಯಾಹ್ನ ಪೂಜೆ, ಪ್ರಸಾದ. ಅಂದು ಬೆಳಿಗ್ಗೆ 4.30 ರಿಂದ ಪಿತೃಗಳಿಗೆ ಪಿಂಡವನ್ನು ಭಕ್ತಾದಿಗಳಿಂದ ಪುರೋಹಿತರು ಹಾಕಿಸುವರು.

ಸಾಯಂಕಾಲ 4.30 ಗಂಟೆಯಿಂದ ಉತ್ಸವ ಬಲಿ, ನೃತ್ಯ, ದೇವರ ಜಳಕ, ದೇವರು ಒಳಗೆ ಹೋದ ನಂತರ ಶ್ರೀ ಚಾಮುಂಡೇಶ್ವರಿಗೆ ತಂಬಿಲ ಇದರ ಮಧ್ಯೆ ಶ್ರೀ ಅನ್ನಪೂರ್ಣೇಶ್ವರಿ ದುರ್ಗಾಪೂಜೆ ಇರಲಿದೆ.

ತಾ. 29 ರಂದು ನವಕಲಶ ಹಾಗೂ ಭಂಡಾರ, ಹಣದ ಎಣಿಕೆ, ಮಹಾಪೂಜೆ, ಪ್ರಸಾದ, ಊಟ, ಊರಿನ ಭಕ್ತರು ಪರ ಊರಿನ ಭಕ್ತರು ಬಂದು ಸೇರಿ ಅವರವರ ಮನೆತನಕ್ಕೆ ಕುಳವಾರಿಗೆ ಸಲ್ಲುವ ಪ್ರಸಾದ ಮರ್ಯಾದೆಗಳನ್ನು ಆ ದಿನವೇ ಪಡೆದುಕೊಳ್ಳುವಂತೆ ಆಡಳಿತ ಮಂಡಳಿ ಕೋರಿದೆ.